
ನವದೆಹಲಿ: ಲೋಕಸಭಾ ಚುನಾವಣೆ ಸೋಲಿನಿಂದ ಬೇಸರದಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ಪಕ್ಷದವರ ಮೇಲೆಯೇ ಮುನಿಸು ಬಂದಿದೆ ಎಂದು ಮೂಲಗಳು ತಿಳಿಸಿವೆ
ಇತ್ತೀಚೆಗೆ ನಡೆದ ಮಾಜಿ ಪ್ರಧಾನಿ ಜವಾಹಾರ್‌ಲಾಲ್ ನೆಹರು ಜನ್ಮದಿನೋತ್ಸವದ ಪ್ರಯುಕ್ತ ಕಾಂಗ್ರೆಸ್ ಆಯೋಜಿಸಿದ್ದ ಅಂತರಾಷ್ಟ್ರೀಯ ವಿಚಾರಣ ಸಂಕೀರಣಕ್ಕೆ ಆಹ್ವಾನಿಸಿಲ್ಲ ಎಂದು ಕಾಂಗ್ರೆಸ್‌ನ ಕೆಲ ನಾಯಕರು ಮುನಿಸಿಕೊಂಡಿದ್ದಾರೆ.
ಕಾಂಗ್ರೆಸ್‌ನಲ್ಲಿ ಭಿನ್ನಮತ ಹೆಚ್ಚುತ್ತಿದ್ದು, ನಾಯಕರ ಮುನಿಸಿಗೆ ಕಾರಣಗಳು ಹೆಚ್ಚಾಗುತ್ತಿದೆ. ಪಿ ಚಿದಂಬರಂ, ಕಮಲ್‌ನಾಥ್, ಎ.ಕೆ ಆಂಟೋನಿ, ಜೈರಾಮ್ ರಮೇಶ್, ಕಪಿಲ್ ಸಿಬಲ್ ಮತ್ತು ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಕೆಲ ನಾಯಕರು ವಿಚಾರ ಸಂಕೀರಣಕ್ಕೆ ಗೈರು ಹಾಜರಾಗಿದ್ದರು.
ಗೈರಾಗಲು ಕಾರಣ ಅವರನ್ನು ವಿಚಾರಗೋಷ್ಠಿಗೆ ಆಹ್ವಾನಿಸಿಲ್ಲ ಎಂಬ ಮಾಹಿತಿ ಹೊರ ಬಿದ್ದಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸದೇ ಕಡೆಗಣಿಸಿರುವುದಕ್ಕೆ ಪಕ್ಷದ ಹೈಕಮಾಂಡ್ ಮತ್ತು ಕಾರ್ಯಕ್ರಮದ ಉಸ್ತುವಾರಿವಹಿಸಿದ್ದ ಆನಂದ್ ಶರ್ಮಾ ಅವರ ಮೇಲೆ ಕಾಂಗ್ರೆಸ್‌ನ ನಾಯಕರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಗಣ್ಯರು ಆಹ್ವಾನಿಸುವಾಗ ಎಡವಟ್ಟು ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದ್ದು, ಆಂಟೋನಿ ಅವರಿಗೆ ಆ ವೇಳೆ ಅನಾರೋಗ್ಯದಿಂದ ಬಳಲುತ್ತಿದ್ದರು, ಇನ್ನೂ ರಮೇಶ್ ಅವರು ಭಾರತದಲ್ಲಿರಲಿಲ್ಲ. ಹಾಗಾಗಿ ಈ ಇಬ್ಬರು ನಾಯಕರು ಕಾರ್ಯಕ್ರಮಕ್ಕೆ ಬರಲಾಗಲಿಲ್ಲ ಎಂದು ಪಕ್ಷದ ಹಿರಿಯ ಕಾರ್ಯಕರ್ತರು ತಿಳಿಸಿದ್ದಾರೆ.
Advertisement