"ಟೈಮ್ 'ವರ್ಷದ ವ್ಯಕ್ತಿ ; ಮೋದಿಯೇ ಮುಂದು

ವಿಶ್ವದ ಪ್ರಭಾವಿ ನಿಯತಕಾಲಿಕೆ 'ಟೈಮ್‌' 2014ನೇ ಸಾಲಿನ ವರ್ಷದ ವ್ಯಕ್ತಿಗಳ ಪಟ್ಟಿ ಪ್ರಧಾನಿ ನರೇಂದ್ರಮೋದಿ ಸ್ಥಾನ ಪಡೆದು...
ನರೇಂದ್ರ ಮೋದಿ
ನರೇಂದ್ರ ಮೋದಿ

ನ್ಯೂಯಾರ್ಕ್: ವಿಶ್ವದ ಪ್ರಭಾವಿ ನಿಯತಕಾಲಿಕೆ 'ಟೈಮ್‌' 2014ನೇ ಸಾಲಿನ ವರ್ಷದ ವ್ಯಕ್ತಿಗಳ ಪಟ್ಟಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದುಕೊಂಡಿದ್ದಾರೆ. ನಿಯತಕಾಲಿಕೆ ಒಟ್ಟು ವಿಶ್ವ ಮಟ್ಟದಲ್ಲಿ ಪ್ರಭಾವಿಗಳಾಗಿರುವ  ಒಟ್ಟು 50 ಮಂದಿಯನ್ನು ಈ ಗೌರವಕ್ಕೆ ಆಯ್ಕೆ ಮಾಡಿದೆ. ಮುಂದಿನ ತಿಂಗಳು ವಿಜೇತರ ಹೆಸರನ್ನು ಪ್ರಕಟಿಸಲಾಗುತ್ತದೆ. ಪ್ರಧಾನಿ ಮೋದಿಗೆ ಇದುವರೆಗೆ ಶೇ. 8.1 ರಷ್ಟು ಮತಗಳು ಪ್ರಾಪ್ತಿಯಾಗಿವೆ. ನಂತರ ಸ್ಥಾನದಲ್ಲಿ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್, ಅಮೆರಿಕ ವಿದೇಶಾಂಗ ಸಚಿನ್ ಜಾನ್ ಕೆರಿ ಇದ್ದಾರೆ.


ಮೋದಿ ಬಗ್ಗೆ ವಿವರಣೆ ಏನು?: ಒಂದು ಕಾಲದಲ್ಲಿ ಗುಜರಾತ್‌ನಲ್ಲಿ ವಿವಾದಾತ್ಮಕ ನಾಯಕರಾಗಿದ್ದರು ಮೋದಿ. ಆದರೆ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ನೇತೃತ್ವ ವಹಿಸಿ ಗೆದ್ದು ಭಾರತದ ಪ್ರಧಾನಿಯೂ ಆದರು. ಭಾರತಕ್ಕೆ ಉತ್ತಮ ಆರ್ಥಿಕ ಬೆಳವಣಿಗೆ ನೀಡುವ ಭರವಸೆಯನ್ನು ಚುನಾವಣೆ ವೇಳೆ ನೀಡಿದ್ದರು ಎಂದು ಪ್ರಧಾನಿ ಮೋದಿ ಬಗ್ಗೆ ಟೈಮ್ ನಿಯತಕಾಲಿಕೆ ಕೊಂಡಾಡಿದೆ.

ಪಟ್ಟಿಯಲ್ಲಿನ ಪ್ರಮುಖರು: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಇರಾನ್ ನಾಯಕ ಆಯತೊಲ್ಲ ಖೊಮೇನಿ, ಇಸ್ರೇಲಿ ಪ್ರಧಾಮಿ ಬೆಂಜಮಿನ್ ನೆತನ್ಯಾಹು, ಪಾಕಿಸ್ತಾನದ ಮಕ್ಕಳ ಹೋರಾಟಗಾರ್ತಿ ಮಲಾಲ ಯೂಸಫ್ ಝಾಯ್, ಇಸಿಸ್ ಉಗ್ರ ಸಂಘಟನೆ ಮುಖ್ಯಸ್ಥ ಅಬು ಬಕರ್ ಅವ್ ಬಗ್ದಾದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಅಮೆರಿಕದ ಜನಪ್ರಿಯ ಟಿವಿ ತಾರೆ ಕಿಮ್ ಕಾದರ್‌ಶಿಯಾನ್ ವರ್ಷದ ವ್ಯಕ್ತಿ ಪಟ್ಟಿಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com