ಹಾಲಿನಲ್ಲಿ ಸ್ನಾನ

ತಿಂಗಳಾಂತ್ಯದವರೆಗೆ ನ್ಯಾಯಾಂಗದ ಬಂಧನಕ್ಕೆ ಒಳಗಾಗಿರುವ...
ರಾಂಪಾಲ್‌
ರಾಂಪಾಲ್‌

ಚಂಡೀಗಡ: ತಿಂಗಳಾಂತ್ಯದವರೆಗೆ ನ್ಯಾಯಾಂಗದ ಬಂಧನಕ್ಕೆ ಒಳಗಾಗಿರುವ ಹಿಸಾರ್ನ ದೇವ 'ದಾನವ'ನ ವೈಭವೋಪೇತ ವಿಲಾಸಗಳು ಬಹಿರಂಗ ವಾಗತೊಡಗಿವೆ. ಆತನನ್ನು ದೇವರು ಎಂದು ನಂಬಿಕೊಂಡಿದ್ದ ವ್ಯಕ್ತಿಗಳು ರಾಂಪಾಲ್‌ಗೆ ಪ್ರತಿ ದಿನ ಹಾಲಿನಲ್ಲಿ ಸ್ನಾನ ಮಾಡಿಸುತ್ತಿದ್ದರಂತೆ. ಅದನ್ನು ಖೀರು ಮಾಡಿಸಿಕೊಂಡು ಸೇವಿಸುತ್ತಿದ್ದ. ಮಾತ್ರವಲ್ಲ ಭಕ್ತರಿಗೆ ಕೂಡ ಅದನ್ನು ಪ್ರಸಾದ ರೂಪದಲ್ಲಿ ಕೊಡುತ್ತಿದ್ದ.

ತ್ರಿಮೂರ್ತಿಗಳ ಅವತಾರ


ತಾನು ಬ್ರಹ್ಮ, ವಿಷ್ಣು, ಮಹೇಶ್ವರ ಅವತಾರ ಎಂದು ರಾಂಪಾಲ್ ಭಕ್ತರಿಗೆ ಮನ ಮುಟ್ಟುವಂತೆ ವಿವರಿಸುತ್ತಿದ್ದ. ಆತನ ಬಳಿ ವೈಭವೋಪೇತ ಬಿಎಂಡಬ್ಲ್ಯೂ ಕಾರು ಇತ್ತು. ಅದರಲ್ಲೇ ಆತ ಪ್ರಯಾಣಿಸುತ್ತಿದ್ದ. ಬರೋಬ್ಬರಿ ಒಂದು ವಾರ ಕಾಲ ಸರ್ವ ರೀತಿಯ ಅವಾಂತರಗಳಿಗೆ ಕಾರಣವಾಗಿದ್ದ ಆಶ್ರಮ ಬರೋಬ್ಬರಿ 12 ಎಕರೆ ಇತ್ತು.

ಆಶ್ರಮದಲ್ಲಿ ತೀವ್ರ ತಪಾಸಣೆ


ರಾಂಪಾಲ್ ಬಂಧನದ ಮಾರನೇ ದಿನವಾದ ಗುರುವಾರ ಪೊಲೀಸರು ಸತ್ಲೋಕ್ ಆಶ್ರಮದೊಳಗೆ ತೀವ್ರ ತಪಾಸಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಂಪ್ಯೂಟರ್‌ಗಳು, ಹಾರ್ಡ್‌ಡಿಸ್ಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಆಶ್ರಮವು 12 ಎಕರೆ ಪ್ರದೇಶದಲ್ಲಿ ವ್ಯಾಪಿಸಿದ್ದು, ಒಳಗಿದ್ದ ಅವನ್ನೆಲ್ಲ ಹೊರಗೆ ಕಳುಹಿಸಲಾಗಿದೆ. ರಾಂಪಾಲ್‌ನ ಕೆಲವು ಕಮಾಂಡೋಗಳು ಇನ್ನೂ ಒಳಗೇ ಅವಿತಿರುವ ಶಂಕೆ ವ್ಯಕ್ತವಾಗಿದೆ. ಏತನ್ಮಧ್ಯೆ, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ನಡೆಸಲಿದೆ. ಪ್ರಕರಣ ಸಂಬಂಧ ಈವರೆಗೆ 450ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ.

ರಾಂಪಾಲ್‌ಗಿತ್ತೇ ನಕ್ಸಲ್ ಸಂಪರ್ಕ?

ಈ ಎಲ್ಲ ಬೆಳವಣಿಗೆಗಳ ನಡುವೆ ದೇವಮಾನವ ರಾಂಪಾಲ್‌ಗೆ ಮಾವೋವಾದಿಗಳೊಂದಿಗೆ ಸಂಪರ್ಕವಿತ್ತೇ ಎಂಬ ಪ್ರಶ್ನೆಯೂ ಮೂಡಿದೆ. ಆಗಸ್ಟ್‌ನಲ್ಲಿ ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಉಪವಲಯ ಕಮಾಂಡೋ ಆಗಿದ್ದ ಮಹಾವೀರ್ ಸಕ್ಲಾನಿಯನ್ನು ಇದೇ ರಾಂಪಾಲ್‌ನ ಆಶ್ರಮದಲ್ಲಿ ಬಂಧಿಸಲಾಗಿತ್ತು. ಆಶ್ರಮದಲ್ಲಿದ್ದ ವೇಳೆ ಈತನೇ ರಾಂಪಾಲ್ ಬೆಂಬಲಿಗರಿಗೆ ಪೆಟ್ರೋಲ್ ಬಾಂಬ್ ತಯಾರಿಸುವ ಬಗ್ಗೆ ಹಾಗೂ ಶಸ್ತ್ರಾಸ್ತ್ರಗಳ ಬಳಕೆ ಬರುತ್ತಿದ್ದ ಭಕ್ತರಿಗೆ ತಾನೊಬ್ಬ ವೈದ್ಯ ಎಂದೂ ಹೇಳಿಕೊಂಡಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ರಾಂಪಾಲ್ ಯಾರು?
ಈತ ಹರ್ಯಾಣದ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿದ್ದ. 2000ರಲ್ಲಿ ಆತನನ್ನು ವಜಾ ಮಾಡಲಾಯಿತು.

ಧಾರ್ಮಿಕ ಒಲವು ಯಾವತ್ತಿನಿಂದ?

1993 ರಿಂದಲೇ ಆತ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಬಾಗವಹಿಸುತ್ತಿದ್ದ.

ಆಶ್ರಮ ಸ್ಥಾಪನೆ ಮಾಡಿದ್ದು ಯಾವಾಗ?

1999ರಲ್ಲಿ ರೋಹ್‌ತಕ್‌ನಲ್ಲಿ ಆರಂಭಿಸಿದ್ದ.

ಆತನ ವಿರುದ್ಧ ಆರೋಪಗಳೇನು?

ಕೊಲೆ, ಸುಲಿಗೆ, ನ್ಯಾಯಾಂಗ ನಿಂದನೆ.

ಪ್ರಕರಣ ಯಾವುದು?

2006ರಲ್ಲಿ ನಡೆದ ಕೊಲೆ ಪ್ರಕರಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com