ಕಾಂಗ್ರೆಸ್ ನಾಯಕತ್ವ ಸ್ಥಾನಕ್ಕೆ ಚಿದು ಸ್ಪರ್ಧಿಸಲಿ ಎಂದ ದಿಗ್ವಿಜಯ್

ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್
Updated on

ನವದೆಹಲಿ: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ನಂತರ ಕಾಂಗ್ರೆಸ್‌ನಲ್ಲಿ ಆರಂಭವಾದ ನಾಯಕತ್ವ ಜಗಳದ ಬಿಸಿ ಇನ್ನೂ ತಣ್ಣಗಾಗಿಲ್ಲ.

ಪಕ್ಷದ ನಾಯಕತ್ವದ ಬಗೆಗಿನ ಅಸಮಾಧಾನವನ್ನು ಕೆಲವರು ಬಹಿರಂಗವಾಗಿಯೇ ಹೊರಹಾಕಿದರೆ, ಮತ್ತೆ ಕೆಲವರು ವಂಶಾಡಳಿತಕ್ಕೆ ಅಂಟಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಪಕ್ಷದ ನಾಯಕ ಚಿದಂಬರಂ ಅವರು ನಾಯಕತ್ವದ ಬಗ್ಗೆ ತಮಗಿದ್ದ ನಿಲುವನ್ನು ವ್ಯಕ್ತಪಡಿಸಿ ವಿವಾದಕ್ಕೆ ಕಾರಣವಾಗಿದ್ದರು. ಇದಕ್ಕೆ ಪ್ರತೀಕಾರವಾಗಿ ಕಾಂಗ್ರೆಸ್, ಇತ್ತೀಚೆಗೆ ನಡೆದ ಮಾಜಿ ಪ್ರಧಾನಿ ನೆಹರೂರವರ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಿದಂಬರಂ ಅವರಿಗೆ ಆಹ್ವಾನ ನೀಡದೇ ಸುದ್ದಿ ಮಾಡಿತ್ತು. ಈ ಎಲ್ಲ ಬೆಳವಣಿಗಗಳ ನಡುವೆ ಈಗ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಸಾರ್ವಜನಿಕವಾಗಿಯೇ ಚಿದುಗೆ ಟಾಂಗ್ ನೀಡಿದ್ದಾರೆ.

ಚಿದು ಅವರಿಗೆ ಮನಸ್ಸಿದ್ದರೆ ಮುಂದಿನ ವರ್ಷ ನಡೆಯಲಿರುವ ಕಾಂಗ್ರೆಸ್ ನಾಯಕನ ಚುನಾವಣೆಯಲ್ಲಿ ಸ್ಪರ್ಧಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಮೂಲಕ ರಾಹುಲ್ ಗಾಂಧಿ ಅವರ ಪರಮಾಪ್ತ ದಿಗ್ವಿಜಯ್ ಅವರು ಪಕ್ಷದ ಈಗಿನ ನಾಯಕತ್ವದ ಮೇಲೆ ತಮಗಿರುವ ಆತ್ಮೀಯ ನಂಟನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com