ಕರ್ನಾಟಕದಲ್ಲೂ ಸೌರ ಪಾರ್ಕ್

25 ಸೌರ ಪಾರ್ಕ್ ನಿರ್ಮಾಣದ ಕನಸು ಹೊತ್ತಿರುವ ಕೇಂದ್ರ ಸರ್ಕಾರ...
ಸೌರ ಪಾರ್ಕ್
ಸೌರ ಪಾರ್ಕ್

ಮುಂಬೈ: 25 ಸೌರ ಪಾರ್ಕ್ ನಿರ್ಮಾಣದ ಕನಸು ಹೊತ್ತಿರುವ ಕೇಂದ್ರ ಸರ್ಕಾರ ಇದೀಗ ವಿದ್ಯುತ್ ಯೋಜನೆ ಕೈಗೊಳ್ಳಲಿರುವ ಹಲವು ರಾಜ್ಯಗಳಲ್ಲಿ 12 ಪ್ರದೇಶಗಳನ್ನು ಗುರುತಿಸಿದೆ ಎಂದು ಹೊಸ ಮತ್ತು ನವೀಕರಿಸಲಾಗುವ ಇಂಧನಗಳ ಸಚಿವಾಲಯ ತಿಳಿಸಿದೆ.

ಮುಂಬರುವ 5 ವರ್ಷಗಳಲ್ಲಿ 25 ಸೌರಪಾರ್ಕ್‌ಗಳ ನಿರ್ಮಾಣ ಗುರಿ ಹೊಂದಲಾಗಿದ್ದು, ಪ್ರತಿ ಪಾರ್ಕ್‌ನಲ್ಲಿ 500 ರಿಂದ 1000 ಮೆ.ವ್ಯಾ. ನಂತೆ ಒಟ್ಟಾರೆ 25 ಪಾರ್ಕ್‌ಗಳಲ್ಲಿ 20 ಸಾವಿರ ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ. 12 ಪ್ರದೇಶಗಳ ಯೋಜನೆಯ ಕರಡು ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದ್ದು, ಶೀಘ್ರದಲ್ಲಿ ಸಂಪುಟದಿಂದ ಒಪ್ಪಿಗೆ ಪಡೆಯಲಾಗುವುದು. ನಂತರ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ ತರುಣ್ ಕಪೂರ್ ತಿಳಿಸಿದ್ದಾರೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ ಮತ್ತು ಪಂಜಾಬ್‌ನಲ್ಲಿ ಜಾಗಗಳನ್ನು ಗುರುತಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com