
ಮಂಗಳೂರು: ಸರ್ಕಾರಿ ವೈದ್ಯರ ಕೊರತೆ ನೀಗಿಸಲು ನಿವೃತ್ತ ವೈದ್ಯರ ನೇಮಕಕ್ಕೆ ಆದೇಶ ಹೊರಡಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
65 ವರ್ಷದೊಳಗಿನ ತಜ್ಞ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಈ ರೀತಿ ನೇಮಕವಾದ ವೈದ್ಯರು 3 ವರ್ಷಗಳ ಅವಧಿಗೆ ಸೇವೆಯನ್ನು ನೀಡಬಹುದು. ಖಾಸಗಿ ವೈದ್ಯರಿಗೂ ಮಾಸಿಕ, ದಿನ ವಹಿ ಗುತ್ತಿಗೆ ಆಧಾರದಲ್ಲಿ ವೈದ್ಯಕೀಯ ಸೇವೆ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಅರವಳಿಕೆ ತಜ್ಞರು ಪ್ರತಿ ಶಸ್ತ್ರ ಚಿಕಿತ್ಸೆ ಲೆಕ್ಕದಲ್ಲಿ ಸೇವೆ ನೀಡಲು ಮುಂದೆ ಬಂದಿದ್ದಾರೆ. ರಾಜ್ಯದಲ್ಲಿ ರೇಡಿಯಾಲಜಿಸ್ಟ್‌ಗಳ ಕೊರತೆ ಇದೆ. ಆದ್ದರಿಂದ ಸ್ಕ್ಯಾನ್ ಇತ್ಯಾದಿ ತಾಂತ್ರಿಕ ಸಹಾಯಕರಿಗೆ ತರಬೇತಿ ನೀಡಲಾಗುವುದು. ರಾಜ್ಯದಲ್ಲಿ ರೇಡಿಯಾಲಜಿಸ್ಟ್‌ಗಳನ್ನು ವಲಯವಾರು ಗುರುತಿಸಿ ಅವರ ಸೇವೆಯನ್ನು ಅಂತರ್ಜಾಸಲ ಮೂಲಕ (ಟೆಲಿ ಸರ್ವಿಸ್) ಪಡೆಯಲಾಗುವುದು ಎಂದರು.
ಶಾಸಕರಿಗೂ ಅವಕಾಶ
ರಾಜ್ಯದಲ್ಲಿ ವೈದ್ಯರಾಗಿರುವ ಶಾಸಕರೂ ಕೂಡ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಲು ಅವಕಾಶ ಕೋರಿದ್ದಾರೆ. ಒಟ್ಟು 9 ವೈದ್ಯ ಶಾಸಕರಿದ್ದಾರೆ. ಆಸಕ್ತರಿಗೆ ಅವರ ವ್ಯಾಪ್ತಿಯ ಆರೋಗ್ಯ ಕೇಂದ್ರ, ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ನೀಡಲಾಗುವುದು ಎಂದರು.
108ತ್ತೆ 198 ಸೇರ್ಪಡೆ
ರಾಜ್ಯಕ್ಕೆ 108 ಆರೋಗ್ಯ ಕವಚಕ್ಕೆ ಹೊಸದಾಗಿ ಸೇರ್ಪಡೆಗೊಂಡ 198 ಆ್ಯಂಬುಲೆನ್ಸ್‌ಗಳನ್ನು ನ.25ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಇದರಲ್ಲಿ 98 ಆ್ಯಂಬುಲೆನ್ಸ್‌ಗಳು ರಾಜ್ಯ ಬಜೆಟ್ ಮಂಡನೆಯಿಂದ ಅನುದಾನ ನೀಡಲಾಗಿದೆ ಎಂದು ಸಚಿವ ಖಾದರ್ ತಿಳಿಸಿದರು.
Advertisement