
ನವದೆಹಲಿ: ತಜ್ಞರ ಸಮಿತಿ, ಬಿಡಿ ಸಿಗರೇಟ್ ಮಾರಾಟವನ್ನು ನಿಷೇಧಿಸುವಂತೆ ಕೊಟ್ಟಿರುವ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಸಚಿವರು ಹೇಳಿರುವ ಹಿನ್ನಲೆಯಲ್ಲಿ ತಂಬಾಕು ಸಂಸ್ಥೆಗಳ ಷೇರು ದರ ಕುಸಿತ ಕಂಡಿದೆ.
ಇದೇ ಸಮಿತಿ ಸಿಗರೇಟ್ ಕೊಳ್ಳಲು ಕನಿಷ್ಠ ವಯೋಮಿತಿಯನ್ನು ಹೆಚ್ಚಿಸಲು ಹಾಗೂ ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ನೀತಿ ೨೦೦೩ ನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಶುಲ್ಕವನ್ನು ವಿಧಿಸಲು ಕೂಡ ಪ್ರಸ್ತಾವನೆ ನೀಡಿದೆ.
ರಾಜ್ಯಸಭೆಗೆ ನೀಡದ ಲಿಖಿತ ಉತ್ತರದಲ್ಲಿ ಆರೋಗ್ಯ ಸಚಿವ ಜೆ ಪಿ ನಂದಾ "ಸಚಿವಾಲಯ ಸಮಿತಿಯ ಪ್ರಸ್ತಾವನೆಗಳನ್ನು ಒಪ್ಪಿಕೊಂಡಿದೆ ಮತ್ತು ಹೆಚ್ಚಿನ ಚರ್ಚೆಗಾಗಿ ಸಂಪುಟಕ್ಕೆ ಈ ಕರಡು ನೀತಿಯನ್ನು ಕಳುಹಿಸಲಾಗಿದೆ" ಎಂದಿದ್ದಾರೆ.
ಈಗ ಸಂಪುಟದ ಮುಂದೆ ಈ ಶಿಫಾರಸ್ಸುಗಳು ಇದ್ದು, ಇದನ್ನು ಕಾನೂನು ಮಾಡುವ ಮುಂಚೆ ಲೋಕಸಭೆಯ ಒಪ್ಪಿಗೆ ಪಡೆಯಬೇಕಿದೆ.
ಈ ಶಿಫಾರಸ್ಸನ್ನು ಕಾನೂನು ಮಾಡಿದರೆ, ತಂಬಾಕು ಉತ್ಪನ್ನಗಳ ಮಾರಾಟ ೧೦ ರಿಂದ ೨೦% ಕಡಿಮೆಯಾಗಲಿದೆ ಎನ್ನುತ್ತಾರೆ ಸಮೀಕ್ಷಕರು. ಸಿಗರೇಟ್ ಉದ್ಯಮ ಸರ್ಕಾರದ ಬೊಕ್ಕಸೆಗೆ ೨೫ಸಾವಿರ ಕೋಟಿ ತೆರಿಗೆ ಆದಾಯವನ್ನು ತಂದುಕೊಟ್ಟರೂ, ಅನಾರೋಗ್ಯದ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
Advertisement