
ನವದೆಹಲಿ: ಚಳಿಗಾಲ ಅಧಿವೇಶನದ ಮೊದಲ ದಿನ ಕಪ್ಪು ಹಣವನ್ನು ಚರ್ಚಿಸಲು ವಿರೋಧ ಪಕ್ಷಗಳು ನಡೆಸಿದ ಗದ್ದಲದಿಂದ ಯಾವುದೇ ಕಲಾಪಗಳು ನಡೆಯದೆ, ಇಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಕಾಂಗ್ರೆಸ್ ನ ಹಲವು ನಾಯಕರು ಕಪ್ಪು ಹಣದ ವಿಷಯದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ಅವರ ಭಾಷಣದ ಕೆಲವು ಮುಖ್ಯಾಂಶಗಳು:
* ಚುನಾವಣೆಗೂ ಮುಂಚೆ, ದೇಶದ ಬಜೆಟ್ ನ ಸುಮಾರು ಐದರಷ್ಟು ಮೊತ್ತದ ಕಪ್ಪು ಹಣವನ್ನು ಭಾರತಕ್ಕೆ ವಾಪಸ್ ತರುತ್ತೇವೆ ಎಂದಿದ್ದರು ಮೋದಿ.
* ಸರ್ಕಾರವನ್ನು ಬದಲಾಯಿಸಿದರೆ ಕಪ್ಪು ಹಣ ಮಾಂತ್ರಿಕವಾಗಿ ವಾಪಸ್ ಬರುವುದೆಂದು ದೇಶವನ್ನು ನಂಬಿಸಲಾಗಿತ್ತು.
* ಯುಪಿಎ ಸರ್ಕಾರದ ಹೆಸರು ಹಾಳುಗೆಡವುದಷ್ಟೆ ಬಿಜೆಪಿ ಉದ್ದೇಶವಾಗಿತ್ತು.
* ಕಪ್ಪು ಹಣವನ್ನು ವಾಪಸ್ ತರಲು ಯುಪಿಎ ಸರ್ಕಾರವೇ ಕಾರ್ಯಪ್ರವೃತ್ತಿಯಾಗಿತ್ತು.
* ಸರ್ಕಾರಕ್ಕೆ ಈಗ ಸಿಕ್ಕಿರುವ ಮಾಹಿತಿಯನ್ನು ಸಂಪೂರ್ಣ ಬಹಿರಂಗಗೊಳಿಸಬೇಕು ಮತ್ತು ವಿದೇಶದಲ್ಲಿ ಕಪ್ಪು ಹಣ ಇಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಭಾಷಣದ ಮುಖ್ಯಾಂಶಗಳು
* ಈ ಕೂಡಲೆ ಕಪ್ಪು ಹಣ ಹೊಂದಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕು.
* ಸರ್ಕಾರ ೫೦ ಜನರಿದ್ದಾರೆ ಎಂದಿತ್ತು, ಆದರೆ ಅವರ ಹೆಸರುಗಳನ್ನೂ ಹೇಳಲು ಹಿಂಜರಿದಿದೆ.
* ಹಪ್ಪು ಹಣ ವಾಪಸ್ ತರಲು ಸರ್ಕಾರ ಯಾವ ಯಾವ ದೇಶಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಮೋದಿ ತಿಳಿಸಲಿ.
* ನೂರು ದಿನಗಳೊಳಗೆ ಕಪ್ಪು ಹಣ ತರುತ್ತೇವೆ ಎಂದು ವಚನ ಕೊಟ್ಟಿದ್ದ ಸರ್ಕಾರ ಸೋತಿದೆ.
Advertisement