ಸಿಂಧುರತ್ನ ಜಲಾಂತರ್ಗಾಮಿ ಅಪಘಾತ ಪ್ರಕರಣ: 7 ಮಂದಿ ಅಧಿಕಾರಿಗಳೇ ಕಾರಣ

ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿಯೇ ಈ ದುರ್ಘಟನೆ ಸಂಭವಿಸಿದೆ...
ಐಎನ್‌ಎಸ್ ಸಿಂಧುರತ್ನ ಜಲಾಂತಗಾರ್ಮಿ ಯುದ್ದ ನೌಕೆ
ಐಎನ್‌ಎಸ್ ಸಿಂಧುರತ್ನ ಜಲಾಂತಗಾರ್ಮಿ ಯುದ್ದ ನೌಕೆ

ನವದೆಹಲಿ: ಐಎನ್‌ಎಸ್ ಸಿಂಧುರತ್ನ ಜಲಾಂತಗಾರ್ಮಿ ಯುದ್ದ ನೌಕೆ ದುರ್ಘಟನೆಗೆ 7 ಮಂದಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ವಿಚಾರಣೆ ವೇಳೆ ತಿಳಿದುಬಂದಿದ್ದು, ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ತಿಳಿಸಿದ್ದಾರೆ.

ದುರ್ಘಟನೆಗೆ ಕಾರಣರಾದ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸಲು ಆದೇಶ ಹೊರಡಿಸಲಾಗಿದೆ ಎಂದು ಅವರು ರಾಜ್ಯಸಭೆಯಲ್ಲಿ ಸ್ಪಷ್ಪನೆ ನೀಡಿದ್ದಾರೆ.

ಐಎನ್‌ಎಸ್ ಸಿಂಧುರತ್ನ ಜಲಾಂರ್ಗಾಮಿ ನೌಕೆ ದುರ್ಘಟನೆ ಸಂಬಂಧ ವಿಚಾರಣೆ ನಡೆಸಿದ ತಂಡ, ಯುದ್ದ ನೌಕೆ ಅವಘಡಕ್ಕೆ 7 ಮಂದಿ ಅಧಿಕಾರಿಗಳೇ ಮೂಲ ಕಾರಣ ಎಂದು ವಿಚಾರಣಾ ತಂಡ ಮಾಹಿತಿ ನೀಡಿದ್ದು, ಈ ಕುರಿತು ಅವರ ವಿರುದ್ಧ ವಿಚಾರಣೆ ನಡೆಸಲು ಆದೇಶ ಹೊರಡಿಸಲಾಗಿದೆ.

ಈ 7 ಮಂದಿ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಜಾಗರೂಕತೆಯಿಂದಾಗಿಯೇ ಈ ದುರ್ಘಟನೆ ಸಂಭವಿಸಿದೆ ಎಂದು ವಿಚಾರಣಾ ತಂಡ ತಿಳಿಸಿದೆ.

ಈ ಅಧಿಕಾರಿಗಳ ವಿರುದ್ದ ನೌಕಾ ಪಡೆ ಕ್ರಮ ಕೈಗೊಂಡಿದೆ. ವಿಚಾರಣೆ ಇನ್ನೂ ಪೂರ್ಣಗೊಳ್ಳದಿದ್ದು, ತನಿಖೆ ಮುಂದುವರೆದಿದೆ ಎಂದು ಅವರು ವಿವರಣೆ ನೀಡಿದರು.

ಕಳೆದ 2013ರ ಆಗಸ್ಟ್‌ನಲ್ಲಿ ಐಎನ್‌ಎಸ್ ಸಿಂಧುರಕ್ಷಾ ಯುದ್ದ ನೌಕೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ನೌಕೆಯಲ್ಲಿದ್ದ 18 ಮಂದಿ ಸಿಬ್ಬಿಂದಿ ಸಾವನ್ನಪ್ಪಿದ್ದರು. ಅದೇ ರೀತಿ ಕಳೆದ ಫೆಬ್ರವರಿ 26 ರಂದು ಐಎನ್‌ಎಸ್ ಸಿಂಧುರತ್ನ ಹಡಗಿನಲ್ಲಿ ಸಂಭವಿಸಿದ ಅಗ್ನಿ ಅವಘಡಕ್ಕೆ ಇಬ್ಬರು ಸಿಬ್ಬಂಧಿ ಸಾವನ್ನಪ್ಪಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com