ಎಲ್ಲ ರೈಲು ಸೇತುವೆಗಳೂ ಸುರಕ್ಷಿತ: ಕೇಂದ್ರ ಸರ್ಕಾರ

ದೇಶದ ಎಲ್ಲ ರೈಲು ಸೇತುವೆಗಳು ಸುರಕ್ಷಿತವಾಗಿವೆ ಆದುದರಿಂದ ಆತಂಕ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ದೇಶದ ಎಲ್ಲ ರೈಲು ಸೇತುವೆಗಳು ಸುರಕ್ಷಿತವಾಗಿವೆ ಆದುದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಸರ್ಕಾರ ಲೋಕಸಭೆಯಲ್ಲಿ ಹೇಳಿಕೆ ಕೊಟ್ಟಿದೆ.

ಭಾರತೀಯ ರೈಲ್ವೆಯ ಸೇತುವೆಗಳನ್ನು ಪ್ರತಿ ವರ್ಷ ಎರಡು ಬಾರಿ ತಪಾಸಣೆ ಮಾಡಲಾಗುತ್ತದೆ. ಒಮ್ಮೆ ಮುಂಗಾರು ಮಳೆಗೂ ಮುಂಚೆ ಹಾಗೂ ಮುಂಗಾರಿನ ನಂತರ ವಿಶದವಾಗಿ ತಪಾಸಣೆ ಮಾಡಲಾಗುತ್ತದೆ ಎಂದು ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ ತಿಳಿಸಿದ್ದಾರೆ.

"ಎಲ್ಲ ರೈಲ್ವೆ ಸೇತುವೆಗಳು ಸುರಕ್ಷಿತ ಹಾಗೂ ಭದ್ರವಾಗಿವೆ. ಆತಂಕಗೊಳ್ಳುವ ಅಗತ್ಯವಿಲ್ಲ" ಎಂದು ಲೋಕಸಭೆಯ ಪ್ರಶ್ನೋತ್ತರ ಸಮಯದಲ್ಲಿ ಸಚಿವರು ತಿಳಿಸಿದ್ದಾರೆ. ತಪಾಸಣೆ ವೇಳೆಯಲ್ಲಿ ರಿಪೇರಿ, ಮರು ನಿರ್ಮಾಣದ ಅವಶ್ಯಕತೆ ಬಿದ್ದರೆ ಅವುಗಳನ್ನು ಸರಿಯಾದ ಸಮಯದಲ್ಲಿ ಮಾಡಿದ್ದೇವೆ ಎಂದಿದ್ದಾರೆ.

ಸುರಕ್ಷತಾ ಕ್ರಮಗಳ ಉನ್ನತ ಸಮಿತಿ ಸೇತುವೆಗಳ ಫೋಟೋಗಳನ್ನು ಅಪ್ ಲೋಡ್ ಮಾಡುವ ಕೆಲವು ಸಲಹೆ-ಶಿಫಾರಸ್ಸುಗಳನ್ನು ನೀಡಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com