ಬದೌನ್ ಗ್ಯಾಂಗ್ ರೇಪ್: ಸಿಬಿಐ ವರಿದಿಗೆ ಪೋಷಕರ ಆಶ್ಚರ್ಯ

ಸಹೋದರಿಯರ ಶವ
ಸಹೋದರಿಯರ ಶವ
Updated on

ಲಖನೌ: ವಿಶ್ವದಾದ್ಯಂತ ಚಚೆಗೆ ಗ್ರಾಸವಾಗಿದ್ದ ಬದೌನ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ನೀಡಿದ್ದ ವರದಿಗೆ, ಸಹೋದರಿಯರ ಪೋಷಕರು ಆಶ್ಚರ್ಯ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.

ಆದರೆ ಸಿಬಿಐನ ಈ ವರದಿ ಕೇಳಿದ ಸತ್ತ ಸಹೋದರಿಯರ ಪೋಷಕರು ಇದನ್ನು ನಂಬಲಾಗದೆ, ಆಶ್ಚರ್ಯ ವ್ಯಕ್ತಪಡಿಸಿದ್ದು, ತಮ್ಮ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುವಂತವರಲ್ಲ, ಈ ಕುರಿತು ಸತ್ಯ ಹೊರಬರಬೇಕು, ನಿಜವಾಗಿ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇ ಬೇಕು ಎಂದು ಹೇಳುತ್ತಿದ್ದಾರೆ.

ಕಳೆದ ಮೇ 28ರಂದು ಬದೌನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 14 ಹಾಗೂ 15 ವರ್ಷದ ಸಹೋದರಿಯರಿಬ್ಬರು ಊರಿನ ಮಾವಿನ ಮರವೊಂದರಲ್ಲಿ ನೇಣು ಬಿಗಿದುಕೊಂಡಿರುವ ಹಾಗೆ ಶವ ಪತ್ತೆಯಾಗಿತ್ತು. ಮರು ದಿನ ಸಹೋದರಿಯರನ್ನು ಅಪಹರಿಸಿ, ಅತ್ಯಾಚಾರ ನಡೆಸಿ ಕೊಲೆ ಮಾಡಿ ಮರಕ್ಕೆ ನೇತು ಹಾಕಿದ್ದಾರೆ ಎಂದು ದೂರು ದಾಖಲಾಗಿತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೋಲಿಸ್ ಪೇದೆ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಂತರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಯಿತು. ಸಿಬಿಐ ತನಿಖೆ ನಡೆಸಿ ನ.27ರಂದು ಸಹೋದರಿಯರ ಸಾವು ರೇಪ್ ಹಾಗೂ ಕೊಲೆಯಲ್ಲ ಬದಲಾಗಿ ಇದೊಂದು ಆತ್ಮಹತ್ಯೆ ಎಂದು ಹೇಳಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com