ಜಮ್ಮುವಿಗೆ ಪ್ರಧಾನಿ ಮೋದಿ ಭೇಟಿ: ಉಗ್ರರಿಂದ ಮತ್ತೆ ಗುಂಡಿನ ದಾಳಿ

ಭಾರತೀಯ ಸೇನಾ ಪಡೆ
ಭಾರತೀಯ ಸೇನಾ ಪಡೆ

ಜಮ್ಮು: ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಜಮ್ಮುವಿಗೆ ತೆರಲಿದ್ದು, ಗಡಿಯಲ್ಲಿ ಪಾಕ್ ಉಗ್ರರು ಮತ್ತೆ ಗುಂಡಿನ ದಾಳಿ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಉದ್ಧಮ್‌ಪುರದಲ್ಲಿ ಪಕ್ಷದ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದನ್ನು ವಿರೋಧಿಸಿ ಗಡಿಯಲ್ಲಿ ಉಗ್ರರು ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಸೇನಾ ಪಡೆ ಸಹ ಗುಂಡಿನ ದಾಳಿ ನಡೆಸುತ್ತಿದೆ.

ಪಾಕ್ ಉಗ್ರರ ಗುಂಪೊಂದು ಪೂಂಚ್ ಜಿಲ್ಲೆಯ ಪಂಜ್ನಿ ನಲ್ಲಾಹ್‌ದ ಬಲಕೋಟೆ ಗಡಿಯಿಂದ ಭಾರತದ ಗಡಿಯೊಳಗೆ ನುಸುಳುತ್ತಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಗಳು ಉಗ್ರರ ವಿರುದ್ಧ ಗುಂಡಿನ ದಾಳಿ ನಡೆಸಿದರು. ಈ ದಾಳಿಯಲ್ಲಿ ನಾಲ್ವರು ಉಗ್ರರು, ಮೂವರು ಯೋಧರು ಸೇರಿದಂತೆ ಐದು ಮಂದಿ ನಾಗರಿಕರು ಮೃತಪಟ್ಟಿದ್ದರು.

ಅರ್ನಿಯಾ ಬಳಿ ಸತತ 24 ಗಂಟೆಗಳ ಕಾಲ ನಡೆಸಿದ್ದ ಗುಂಡಿನ ಉಗ್ರರು ಹತರಾಗಿದ್ದಾರೆ ಎಂದು ಭಾವಿಸಲಾಗಿತ್ತು. ನಿನ್ನೆ ಸಂಜೆ ಭದ್ರತಾ ಸಿಬ್ಬಂದಿಗಳು ಅರ್ನಿಯಾ ಬಳಿ ಪರಿಶೀಲನೆ ನಡೆಸಿ, ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಇದೀಗ ಘಟನಾ ಸ್ಥಳದಿಂದ ಮತ್ತೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com