
ಉಧಾಂಪುರ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 30 ವರ್ಷಗಳಿಂದ ಯಾವುದೇ ಅಭಿವೃದ್ಧಿಯಾಗಿಲ್ಲ. ಇಲ್ಲಿಯ ನಾಯಕರು ಕೇವಲು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್‌ಮೇಲ್ ಮಾಡುವುದರಲ್ಲಿ ತೊಡಗಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಎರಡನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಇಂದು ಬಿಜೆಪಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ದೇಶದಲ್ಲಿ ಡಜನ್‌ಗಟ್ಟಲೇ ಪ್ರಧಾನಿಗಳು ಬಂದು ಹೋಗಿದ್ದಾರೆ. ಆದರೆ ಯಾರೋಬ್ಬರು ಜಮ್ಮು ಮತ್ತು ಕಾಶ್ಮೀರಕ್ಕೆ ಎರಡು ಬಾರಿ ಭೇಟಿ ನೀಡಿಲ್ಲ. ಆದರೆ ನಾನು ಬಂದಿದ್ದೇನೆ ಎಂದರು.
'ಪ್ರವಾಹ ಸಂತ್ರಸ್ಥರೊಂದಿಗೆ ನಾನು ದೀಪಾವಳಿ ಆಚರಿಸಲು ನಿರ್ಧರಿಸಿದೆ. ಆದರೆ ನನ್ನ ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ಅಥವಾ ಮತ ಗಳಿಸುವ ಉದ್ದೇಶ ಇಲ್ಲ' ಎಂದರು.
ಕಳೆದ 30 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು ನಾನು ಕೇವಲು ಐದು ವರ್ಷಗಳಲ್ಲಿ ಮಾಡುತ್ತೇನೆ. ಒಂದು ವೇಳೆ ಮಾಡದಿದ್ದರೇ ಅದಕ್ಕೆ ನನ್ನನ್ನೇ ಹೊಣೆಗಾರನಾಗಿ ಮಾಡಿ ಮತ್ತು ಏಕೆ ಮಾಡಿಲ್ಲ ಎಂದು ಪ್ರಶ್ನಿಸಿ ಎಂದು ಪ್ರಧಾನಿ ಹೇಳಿದರು.
Advertisement