ಸಂತ ರಾಂಪಾಲ್ ಬಂಧನ ವೆಚ್ಚ ಬರೋಬ್ಬರಿ 26 ಕೋಟಿ

ರಾಂಪಾಲ್‌
ರಾಂಪಾಲ್‌

ಚಂಢಿಗಡ್: ವಿವಾಧಿತ ಸ್ವಯಂಘೋಷಿತ ದೇವಮಾನವ ಸಂತ ರಾಂಪಾಲ್ ಪತ್ತೆ ಮತ್ತು ಬಂಧನಕ್ಕೆ ವೆಚ್ಚವಾಗಿರುವುದು ಬರೋಬ್ಬರಿ 26 ಕೋಟಿ ರುಪಾಯಿ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಶುಕ್ರವಾರ ಹೇಳಿದೆ.

ಬಿಗಿ ಭದ್ರತೆಯೊಂದಿಗೆ ರಾಂಪಾಲ್‌ರನ್ನು ಇಂದು ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ. ಜಯಪೌಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ವಿಭಾಗೀಯ ಪೀಠದ ಮುಂದೆ ಹಾಜರು ಪಡಿಸಲಾಯಿತು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 23ರಕ್ಕೆ ಮುಂದೂಡಲಾಗಿದ್ದು, ರಾಂಪಾಲ್ ಜೊತೆ ಸಹ ಆರೋಪಿಗಳಾದ ರಾಮ್ ಪಾಲ್ ಧಾಕಾ ಮತ್ತು ಒ.ಪಿ. ಹೂಡಾ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸುವಂತೆ ಪೊಲೀಸರಿಗೆ ಹೈಕೋರ್ಟ್ ಸೂಚಿಸಿದೆ.

ರಾಂಪಾಲ್‌ರ ಬಂಧನಕ್ಕೂ ಮುನ್ನ ಹರಿಯಾಣದ ಹಿಸ್ಸಾರ್‌ನ ಸತ್‌ಲೋಕ್ ಆಶ್ರಮಕ್ಕದ ಮುಂದೆ ಭಾರಿ ಪ್ರತಿಭಟನೆ ನಡೆದಿತ್ತು. ಬಳಿಕ ಪ್ರತಿಭಟನೆ ಹಿಂಸಾರೂಪಕ್ಕೆ ತಾಳಿದ್ದು, ಪ್ರತಿಭಟನಾ ನಿರತರನ್ನು ಸ್ಥಳಾಂತರ ಹಾಗೂ ಸಂತ ರಾಂಪಾಲ್ ಪತ್ತೆಗೆ ಮತ್ತು ಬಂಧನಕ್ಕೆ ಸಂಬಂಧಿಸಿದಂತೆ ಸಂಪೂರ್ಣ ವರದಿಯನ್ನು ಹರಿಯಾಣ ಡಿಜಿಪಿ ಎಸ್.ಎನ್ ವಶಿಷ್ಠ ಅವರು ಕೋರ್ಟ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com