ಸಂಸ್ಕೃತ v/s ಜರ್ಮನ್

ವಿದೇಶಿ ಭಾಷೆ ಕಲಿಯುವುದರಿಂದ ಉದ್ಯೋಗವಕಾಶ ಹೆಚ್ಚಾಗುತ್ತದೆ...
ಜರ್ಮನ್ ದೇಶದ ಲಾಂಛನ
ಜರ್ಮನ್ ದೇಶದ ಲಾಂಛನ
Updated on

ಕೇಂದ್ರಿಯ ವಿದ್ಯಾಲಯಗಳಲ್ಲಿ ಜರ್ಮನ್ ಭಾಷೆ ಬದಲು ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಕಲಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿರ್ಧಾರ ಕೈಗೊಂಡಿದೆ. ಸಚಿವೆ ಸ್ಮೃತಿ ಇರಾನಿ, ಸಂಸ್ಕೃತ ತೃತೀಯ  ಭಾಷಾ ವಿಷಯವಾಗಲಿದ್ದು, ಜರ್ಮನ್ ಭಾಷೆಯನ್ನು ಹೆಚ್ಚುವರಿ ಭಾಷೆಯಾಗಿ ಆಯ್ದುಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದರ ವಿರುದ್ಧ ಪೋಷಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿ ಕ್ರಮಕೈಗೊಳ್ಳುವುದರಿಂದ ಮಕ್ಕಳ ಅಂಕಗಳ ಮೇಲೆ ಇದು ಅಡ್ಡ ಪರಿಣಾಮ ಬೀರುತ್ತದೆ ಎಂದು ಕೆಲವರು ವಿದೇಶಿ ಭಾಷೆ ಕಲಿಯುವುದರಿಂದ ಉದ್ಯೋಗವಕಾಶ ಹೆಚ್ಚಾಗುತ್ತದೆ ಎನ್ನುತ್ತಾರೆ ಉಳಿದ ಕೆಲವರು. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ವಿದೇಶಿ ಭಾಷಾ ಪ್ರೇಮ ಎಷ್ಟರ ಮಟ್ಟಿಗಿದೆ ಎನ್ನುವ ಕುರಿತ ಕಿರುನೋಟ ಇಲ್ಲಿದೆ.

ಫ್ರೆಂಚ್
ಭಾರತದಲ್ಲಿ ಫ್ರೆಂಚ್ ಕಲಿಯುತ್ತಿರುವವರು -5 ಲಕ್ಷ
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2013-14ರಲ್ಲಿ ಫ್ರಾನ್ಸಿಗೆ ತೆರಳಿದ ಭಾರತೀಯರು -3 ಸಾವಿರ
ಭಾರತದಲ್ಲಿ ಫ್ರೆಂಚ್ ಕಲಿಸುವ ಅಧಿಕೃತ ಸಂಸ್ಥೆಗಳು - 13

ಜರ್ಮನ್
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ 2013-24ರಲ್ಲಿ ಜರ್ಮನಿಗೆ ತೆರಳಿದ ಭಾರತೀಯರು ಶೇ.27.7 ಹೆಚ್ಚು (ಕಳೆದ ವರ್ಷಕ್ಕೆ ಹೋಲಿಸಿದರೆ)
'ಸಾವಿರ ಶಾಲೆಗಳಲ್ಲಿ ಜರ್ಮನ್ ಭಾಷೆ' ಕಾರ್ಯಕ್ರಮಕ್ಕೆ ಜರ್ಮನಿ ಮಾಡಿದ ವೆಚ್ಚ ರೂ.3,55,14,212(9,00,000 ಯೂರೋ)

ಮ್ಯಾಂಡರಿನ್
2012ರಲ್ಲಿ ಸಿಬಿಎಸ್‌ಸಿ ಬೆಂಬಲಿಸಿ ಚೀನಾ ಸರ್ಕಾರವು ಎಷ್ಟು ಮಂದಿ ಭಾರತೀಯ ಶಿಕ್ಷಕರಿಗೆ ಮ್ಯಾಂಡರಿನ್ ಭಾಷೆ ತರಬೇತಿ ನೀಡಿತು? 3 ಸಾವಿರ
ಭಾರತದಲ್ಲಿ ಮ್ಯಾಂಡರಿನ್ ಭಾಷೆಯನ್ನು ಕಲಿಸುವ ಸಿಬಿಎಸ್‌ಸಿ ಶಾಲೆಗಳು 100

ಜಪಾನಿ ಭಾಷೆ
2006ರ ಜಪಾನ್ ಫೌಂಡೇಷನ್ ಸಮೀಕ್ಷೆ ಪ್ರಕಾರ ಭಾರತದಲ್ಲಿರುವ ಜಪಾನಿ ಶಿಕ್ಷಕರು - 369
2006ರಲ್ಲಿ ಭಾರತದಲ್ಲಿ ಜಪಾನಿ ಭಾಷೆ ಕಲಿಯುತ್ತಿದ್ದ ವಿದ್ಯಾರ್ಥಿಗಳು - 11,011


ಜರ್ಮನ್ ಭಾಷೆ ಕಲಿಸುವುದನ್ನು ಕೇಂದ್ರೀಯ ವಿದ್ಯಾಲಯಗಳಲ್ಲಿ ನಿಲ್ಲಿಸಿರುವುದು ಭಾರತದ ಬಗ್ಗೆ ಅಪಪ್ರಚಾರ ಮಾಡಿದಂತಾಗಿದೆ. ಜಿ-20 ಶೃಂಗ ಸಭೆಯಲ್ಲೂ ಇದರ ಬಗ್ಗೆ ಚರ್ಚಿಸಲಾಗಿದೆ - ಫಾಲಿ ನಾರಿಮನ್, ಖ್ಯಾತ ನ್ಯಾಯಮೂರ್ತಿಗಳು

ಭಾರತದ ಬಗ್ಗೆ ಜರ್ಮನರಿಗೆಷ್ಟು ಪ್ರೀತಿ!
ಭಾರತದಲ್ಲಿರುವ ಜರ್ಮನ್ ರಾಯಭಾರಿ ಒಬ್ಬರು ಸಸ್ಯಹಾರಿಯಾಗಿದ್ದು, ಮದ್ಯಪಾನದಿಂದ ದೂರವಿದ್ದಾರೆ. ಆದರೆ ಜರ್ಮನಿಯಲ್ಲಿರುವ ಅವರ ಬಂಧು ಬಳಗ ಮಾಂಸಾಹಾರಿಗಳಾಗಿದ್ದು, ಬಿಯರ್ ಪ್ರಿಯರು. ರಜಾ ದಿನಗಳಲ್ಲಿ ತಾಯ್ನಾಡಿಗೆ ತೆರಳುವ ಆಸೆ ಬದಲು ಭಾರತದ ದೇವಾಲಯಗಳಿಗೆ ಭೇಟಿ ನೀಡುವ ಇಚ್ಛೆ ಇವರದ್ದಾಗಿದೆ.

ಜರ್ಮನಿಗೆ ಹೋದರೂ ಅಲ್ಲಿ ಭಾರತೀಯ ತಿಂಡಿ-ತಿನಿಸು ಸಿಗುವ ಹೋಟೆಲ್‌ಗಳಿಗೇ ಹೋಗುತ್ತಾರಂತೆ! ಜರ್ಮನಿಯ ಪ್ರತಿಯೊಂದು ನಗರದಲ್ಲೂ ಯೋಗ ತರಬೇತಿ ಕೇಂದ್ರಗಳಿವೆ. ಬಾಲಿವುಡ್ ಚಿತ್ರ ಮತ್ತು ಹಾಡುಗಳಿಗೆ ಬೇಡಿಕೆಯಿಂದೆ. ಹಾಗಾಗಿ ಅಲ್ಲಿ ಹಿಂದಿ ಭಾಷೆ ಬಗ್ಗೆ ಒಲವೂ ಇದೆ ಎನ್ನುತ್ತಾರೆ ಅವರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com