
ಭುವನೇಶ್ವರ್: ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ವೇಳೆ 56 ವರ್ಷದ ಮಹಿಳೆಯೊಬ್ಬರಿಗೆ ಶಸ್ತ್ರಕ್ರಿಯೆ ವೇಳೆ ವೈದ್ಯನೊಬ್ಬ ಬೈಸಿಕಲ್ ಪಂಪ್ ಬಳಸಿರುವುದಾಗಿ ತಿಳಿದುಬಂದಿದೆ.
ನ.28 ರಂದು ಜನಸಂಖ್ಯಾ ಸ್ಫೋಟ ನಿಯಂತ್ರಿಸುವ ಸಲುವಾಗಿ ಬನರ್‌ಪಲ್ಲಿ ಹಳ್ಳಿಯ ಸ್ಥಳೀಯ ಅಧಿಕಾರಿಗಳು ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರವನ್ನು ಆಯೋಜಿಸಿದ್ದರು. ಈ ಶಿಬಿರದಲ್ಲಿ ಪಾಲ್ಗೊಂಡಿದ್ದ 56ವರ್ಷದ ಮಹಿಳೆಯೊಬ್ಬರಿಗೆ ಮಹೇಶ್ ಪ್ರಸಾದ್ ಎಂಬ ವೈದ್ಯ ಶಸ್ತ್ರಕ್ರಿಯೆ ನಡೆಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದರಿಂದ ಅಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
ತನಿಖೆ ಕೈ ಕೊಂಡಿದ್ದ ಸ್ಥಳೀಯ ಪೊಲೀಸರು ಈಗಾಗಲೇ ಪ್ರಾಥಮಿಕ ತನಿಖೆ ನಡೆಸಿದ್ದು, ಶಸ್ತ್ರಕ್ರಿಯೆ ವೇಳೆ ವೈದ್ಯ ಮಹೇಶ್ ಪ್ರಸಾದ್ ಬೈಸಿಕಲ್ ಪಂಪ್ ಬಳಸಿದ್ದಾರೆ ಎಂದು ತಿಳಿದುಬಂದಿದೆ.
ಹಳ್ಳಿಗಳಲ್ಲಿ ಸಂತಾಹರಣ ಶಸ್ತ್ರಚಿಕಿತ್ಸೆ ಮಾಡುವಾಗ ಉತ್ತಮ ವ್ಯವಸ್ಥೆ ಹಾಗೂ ಉಪಕರಣಗಳು ಸಿಗುವುದಿಲ್ಲ. ಆದ ಕಾರಣ ಬೈಸಿಕಲ್ ಪಂಪ್‌ಗಳನ್ನು ಬಳಸಿಕೊಳ್ಳಲಾಗುತ್ತದೆ. ಇಂತಹ ಬಳಕೆ ಹೊಸ ದೇನು ಅಲ್ಲ ಎಂದು ಶಸ್ತ್ರಕ್ರಿಯೆ ನಡೆಸಿದ ವೈದ್ಯ ಮಹೇಶ್ ಪ್ರಸಾದ್ ಹೇಳಿದ್ದಾರೆ.
ಅಲ್ಲದೇ, ತಾವು ಈಗಾಗಲೇ ಹಲವು ವರ್ಷಗಳಿಂದ ಇಂತಹ 60,000ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದ್ದೇನೆ ಆದರೆ ಇದೂವರೆಗೂ ಯಾವುದೇ ಸಮಸ್ಯೆಗಳೂ ಎದುರಾಗಿರಲಿಲ್ಲ. ಶಸ್ತ್ರಕ್ರಿಯೆಯ ಯಶಸ್ಸಿನಿಂದಾಗಿ ಸರ್ಕಾರದಿಂದಲೇ ಹಲವು ಪ್ರಶಸ್ತಿಗಳು ಪಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಮಹೇಶ್ ಪ್ರಸಾದ್ ಅವರ ಈ ಪ್ರತಿಕ್ರಿಯೆಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಬನರ್‌ಪಲ್ಲಿ ಹಳ್ಳಿಯ ಜನರು ವೈದ್ಯರನ್ನು ಬಂಧಿಸುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಸ್ತುತ ಪ್ರಕರಣ ಸರ್ಕಾರಕ್ಕೆ ಗಮನ ಬಂದಿದ್ದು ಪ್ರಕರಣದ ಕುರಿತು ತನಿಖೆಗೆ ಆದೇಶಿದೆ.
Advertisement