
ಚೆನ್ನೈ: ಗಂಗಾ ನದಿ ಶುದ್ಧೀಕರಣದ ನಂತರ ದಕ್ಷಿಣ ಭಾರತದ ನದಿಯಾದ ಕಾವೇರಿಯನ್ನು ಶುದ್ಧೀಕರಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಗಂಗಾ ಶುದ್ಧೀಕರಣ ಯೋಜನೆ ಈಗಾಗಲೇ ಕೈಗೊಳ್ಳಲಾಗಿದ್ದು, ಇದು ಪೂರ್ಣಗೊಂಡ ನಂತರ ದಕ್ಷಿಣ ಭಾರತದ ನದಿಗಳಾದ ಕಾವೇರಿ ಮತ್ತು ಗೋಧಾವರಿ ನದಿಗಳನ್ನು ಸ್ವಚ್ಛಗೊಳಿಸಲಾಗುವುದು ಎಂದು ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಜಲ ಮಾಲಿನ್ಯಕ್ಕೆ ಮೂಲ ಕಾರಣ ಕಾರ್ಖಾನೆಗಳಿಂದ ಹೊರಬಿಡಲಾಗುತ್ತಿರುವ ರಾಸಾಯನಿಕ. ಕಾವೇರಿ ನದಿಯು ಕೂಡ ಇದೇ ರೀತಿ ಮಾಲಿನ್ಯವಾಗುತ್ತಿದೆ. ಈ ಸಂಬಂಧ ಕ್ರಮಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ.
ಕೇವಲ ಕಾವೇರಿ ನದಿಯಲ್ಲದೇ, ದಕ್ಷಿಣ ಭಾರತದ ಎಲ್ಲಾ ನದಿಗಳ ಶುದ್ಧೀಕರಣಕ್ಕೆ ಪ್ರಮುಖ ಯೋಜನೆಯನ್ನು ಕೈಗೊಳ್ಳಲಾಗುವುದು. ಅದೇ ರೀತಿ ಕಲುಷಿತ ನೀರು ಹೊರ ಬಿಡುವ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
Advertisement