ಖಾಸಗಿ ತೆಕ್ಕೆಗೆ ರೈಲು ನಿಲ್ದಾಣ: ಮೋದಿ

ವಿಮಾನ ಪ್ರಯಾಣಿಕರಂತೆ ರೈಲು ಪ್ರಯಾಣಿಕರಿಗೂ ಉತ್ತಮ ಸೌಲಭ್ಯ ಕಲ್ಪಿಸಲು ದೇಶದ ರೈಲು ನಿಲ್ದಾಣಗಳನ್ನೂ...
ನರೇಂದ್ರ ಮೋದಿ
ನರೇಂದ್ರ ಮೋದಿ

ಗುವಾಹಟಿ: ವಿಮಾನ ಪ್ರಯಾಣಿಕರಂತೆ ರೈಲು ಪ್ರಯಾಣಿಕರಿಗೂ ಉತ್ತಮ ಸೌಲಭ್ಯ ಕಲ್ಪಿಸಲು ದೇಶದ ರೈಲು ನಿಲ್ದಾಣಗಳನ್ನೂ ಖಾಸಗೀಕರಣ ಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.

ರೈಲು ನಿಲ್ದಾಣಗಳ ಸ್ಥಿತಿ 100 ವರ್ಷಗಳ ಹಿಂದೆ ಹೇಗಿತ್ತೋ ಈಗಲೂ ಇದೇ ರೀತಿ ಇದೆ. ಅವುಗಳನ್ನು ಖಾಸಗೀಕರಣಗೊಳಿಸುವ ಮೂಲಕ ಆಧುನೀಕರಣ ಮಾಡಬೇಕಾಗಿದೆ. ಇದಕ್ಕಾಗಿ ಮೊದಲ ಹಂತದಲ್ಲಿ ಖಾಸಗೀರಣಕ್ಕಾಗಿ 10ರಿಂದ 12 ನಿಲ್ದಾಣಗಳನ್ನು ಗುರುತಿಸಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಮೊದಲ ಬಾರಿಗೆ ಈಶಾನ್ಯ ರಾಜ್ಯ ಮೇಘಾಲಯದ ಮೆಂಡಿಪತ್ತರ್‌ಗೆ ಗುವಾಹಟಿಯಿಂದ ಸಂಪರ್ಕ ಕಲ್ಪಿಸುವ ರೈಲು ಯೋಜನೆ ಉದ್ಘಾಟನೆ ವೇಳೆ ಅವರು ಈ ಮಾಹಿತಿ ನೀಡಿದ್ದಾರೆ.

ರಿಯಲ್ ಎಸ್ಪೇಟ್ ದುಬಾರಿಯಾಗುತ್ತಿರುವ ಈ ಸಮಯದಲ್ಲಿ ರೈಲ್ವೆ ಕೂಡ ತನ್ನ ಭೂಮಿಯಲ್ಲಿ ಲಕ್ಸುರಿ ಹೊಟೇಲ್‌ಗಳು, ರೆಸ್ಟೋರೆಂಟ್ ನಿರ್ಮಾಣಕ್ಕೆ ಖಾಸಗಿ ಕಂಪನಿಗಳಿಗೆ ಅವಕಾಶ ಮಾಡಿಕೊಡಬೇಕಿದೆ.

ಒಮ್ಮೆ ಮೊದಲ ಹಂತದ ಖಾಸಗೀಕರಣ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಮುಂದಿನ ಹಂತದಲ್ಲಿ ದೇಶಾದ್ಯಂತ ರೈಲು ನಿಲ್ದಾಣಗಳನ್ನು ಖಾಸಗಿ ನೆರವಿನೊಂದಿಗೆ ಆಧುನೀಕರಣಗೊಳಿಸಲಾಗುವುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com