ತೆಲಂಗಾಣ ಉಪ ಮುಖ್ಯಮಂತ್ರಿ ಬೆಂಗಾವಲು ಕಾರು ಅಪಘಾತ: 7 ಜನರಿಗೆ ಗಾಯ

ತೆಲಂಗಾಣ ಉಪ ಮುಖ್ಯಮಂತ್ರಿ ಟಿ.ರಾಜಯ್ಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ವರಂಗಲ್: ತೆಲಂಗಾಣ ಉಪ ಮುಖ್ಯಮಂತ್ರಿ ಟಿ.ರಾಜಯ್ಯ ಬೆಂಗಾವಲು ಕಾರು ಅಪಘಾತಕ್ಕೀಡಾಗಿ 7 ಜನರು ಗಾಯಗೊಂಡಿರುವ ಘಟನೆ ಯಶವಂತಪುರ ಹಳ್ಳಿಯ ರಘ್‌ನಾಥ್ ಮಂಡಲ್‌ನಲ್ಲಿ ನಡೆದಿದೆ.

ಟಿ.ರಾಜಯ್ಯ ಅವರು ಹನುಮಕೊಂಡಕ್ಕೆ ಹೋಗುವ ವೇಳೆ ರಘ್‌ನಾಥ್ ಮಂಡಲ್ ಪ್ರದೇಶದಲ್ಲಿ ಕಾರು ಪಂಚರ್ ಆಗಿ ಚಾಲಕನ ನಿಯಂತ್ರಣ ತಪ್ಪಿದೆ. ಈ ವೇಳೆ ಮುಂದೆ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಕಾರು ಗುದ್ದಿದ ಪರಿಣಾಮ ಗಾಡಿಯಲ್ಲಿದ್ದವರು ನೆಲಕ್ಕೆ ಬಿದ್ದಿದ್ದಾರೆ.

ನಂತರ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಗಾಡಿಗಳಿಗೂ ನಿಯಂತ್ರಣ ತಪ್ಪಿದ್ದ ಕಾರು ಗುದ್ದಿದ್ದು ಘಟನೆಯಲ್ಲಿ ಗಾಡಿ ಚಾಲಕರು ಹಾಗೂ ನಾಗರೀಕರು ಸೇರಿ 7 ಜನರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ರಘುನಾಥ್‌ಪಲ್ಲಿ ಪೊಲೀಸ್ ಠಾಣೆಯ ಜಿ.ಜಗನ್‌ಮೋಹನ್, ಕೆ ಬಾಬು ಸೇರಿದಂತೆ ಐವರು ನಾಗರೀಕರು ಗಾಯಗೊಂಡಿದ್ದರು. ನಂತರ ಅವರನ್ನು ಜನಗಾಂವ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸಣ್ಣಪುಟ್ಟ ಗಾಯಗಳಾಗಿರುವುದರಿಂದ ವೈದ್ಯರು ಚಿಕಿತ್ಸೆ ನೀಡಿ ನಂತರ ಮನೆಗೆ ಕಳುಹಿಸಿದರು. ಘಟನೆ ಕುರಿತು ಮುಂದಿನ ದಿನಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com