ಭೋಪಾಲ್ ದುರಂತ: 30 ವರ್ಷ ಕಳೆದರೂ ನಿಲ್ಲದ ದುಷ್ಪರಿಣಾಮ

ಭೋಪಾಲ್ ಅನಿಲ ದುರಂತ ಸಂಭವಿಸಿ...
ಭೋಪಾಲ್ ಅನಿಲ ದುರಂತ
ಭೋಪಾಲ್ ಅನಿಲ ದುರಂತ

ಭೋಪಾಲ್: ಭೋಪಾಲ್ ಅನಿಲ ದುರಂತ ಸಂಭವಿಸಿ ಡಿ.2-3 ಕ್ಕೆ ಸರಿಯಾಗಿ 30 ವರ್ಷ ತುಂಬುತ್ತದೆ. ಆದರೆ ಆ ದುರಂತದ ಕರಿನೆರಳು ಮಾತ್ರ ಇಂದಿನ ತಲೆಮಾರನ್ನೂ ಬಿಟ್ಟಿಲ್ಲ. ಈಗ ಹುಟ್ಟುತ್ತಿರುವ ಮಕ್ಕಳೂ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ.

1984ರಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯಲ್ಲಿ ಅನಿಲ ಸೋರಿಕೆ ಉಂಟಾದ ಬಳಿಕ ಈವರೆಗೆ ಸುಮಾರು ಒಂದು  ಸಾವಿರ ಮಕ್ಕಳು ನ್ಯೂನತೆಯನ್ನು ಹೊತ್ತುಕೊಂಡೇ ಹುಟ್ಟಿದ್ದಾರೆ. ಈ ಸಂಖ್ಯೆ ಬೆಳೆಯುತ್ತಲೇ ಇದೆ ಎನ್ನುತ್ತಾರೆ ವೈದ್ಯರು ಹಾಗೂ ಹೋರಾಟಗಾರರು.

ಅನಿಲ ಸೋರಿಕೆಯಿಂದ ಹೊರಬಂದ ರಾಸಾಯನಿಕವು ಇಡೀ ಪ್ರದೇಶವನ್ನು ವ್ಯಾಪಿಸಿದ್ದು, ಅಂತರ್ಜಲವನ್ನೂ ವಿಷಯುಕ್ತವನ್ನಾಗಿಸಿದೆ. ಇದನ್ನೇ ಅನೇಕ ಕುಟುಂಬಗಳು ಸೇವಿಸುತ್ತಿವೆ. ಪರಿಣಾಮ ಅಂಥವರಿಗೆ ಹುಟ್ಟಿದ ಮಕ್ಕಳಲ್ಲಿ ಒಂದಿಲ್ಲೊಂದು ಆರೋಗ್ಯ ಸಮಸ್ಯೆ ಕಾಡುತ್ತಿದೆ ಎನ್ನುವುದು ಹೋರಾಟಗಾರರ ವಾದ. ದುರಂತದ ಬಳಿಕ ಅಲ್ಲಿ ಉಳಿದ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕು ಎಂಬ ಕನಿಷ್ಠ ಕಾಳಜಿಯನ್ನೂ ಯೂನಿಯನ್ ಕಾರ್ಬೈಡ್ ಆಡಳಿತ ಮಂಡಳಿ ತೋರಿಸಿಲ್ಲ. ಸರ್ಕಾರವೂ ಈ ವಿಚಾರವನ್ನು ನಿರ್ಲಕ್ಷಿಸಿದ್ದು, ಇಂತಹ ಸ್ಥಿತಿಗೆ ಅದೂ ನೇರ ಕಾರಣ ಎನ್ನುತ್ತಾರೆ ಅವರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com