
ನವದೆಹಲಿ: ಚೆನ್ನೈನ ಅಮೆರಿಕದ ರಾಯಭಾರ ಕಚೇರಿ ಮೇಲಿನ ದಾಳಿಗೆ ಉಗ್ರರು ಇಟ್ಟಿದ್ದ ಕೋಡ್ ನೇಮ್ ಏನು ಗೊತ್ತಾ?
'ವೆಡ್ಡಿಂಗ್ ಹಾಲ್'(ಮದುವೆ ಛತ್ರ)! ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಹೊಣೆವಹಿಸಿದ್ದು ಯಾರಿಗೆ ಗೊತ್ತಾ? 'ಕುಕ್'(ಬಾಣಸಿಗರು)ಗಳಿಗೆ!
ಚೆನ್ನೈನಲ್ಲಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದ ವಿಶೇಷ ಕೋರ್ಟ್‌ನ ಜಡ್ಜ್ ಪೂನಮಲೀ ನೀಡಿರುವ ತೀರ್ಪಿನಲ್ಲಿ ಅಂಶ ಉಲ್ಲೇಖಿಸಿದ್ದಾರೆ.
ಪಾಕಿಸ್ತಾನದ ಐಎಸ್‌ಐ ಉಗ್ರರನ್ನು ಬಳಸಿಕೊಂಡು ಸಂಚು ರೂಪಿಸುತ್ತಿರುವ ಬಗ್ಗೆ ಇಸ್ರೇಲ್ ಕೇಂದ್ರಕ್ಕೆ ಮಾಹಿತಿ ನೀಡಿತ್ತು. ಅದನ್ನು ಆಧರಿಸಿ ಎನ್‌ಐಎ ಶ್ರೀಲಂಕಾದ ಸಾಕಿರ್ ಹುಸೇನ್‌ನನ್ನು ಬಂಧಿಸಿತ್ತು.
ನ.28ರಂದು ವಿಶೇಷ ಕೋರ್ಟ್ ಆತನಿಗೆ 5 ವರ್ಷ ಜೈಲು ಶಿಕ್ಷೆ ನೀಡಿ ತೀರ್ಪು ನೀಡಿತ್ತು. ರಾಯಭಾರ ಕಚೇರಿ ಜತೆಗೆ ದಕ್ಷಿಣ ಭಾರತದ ಇತರ ಪ್ರಮುಖ ಸ್ಥಳಗಳ ಮೇಲೂ ದಾಳಿ ನಡೆಸಲು ಮಾಲ್ಡೀವ್ಸ್ ಮೂಲಕ ಭಾರತಕ್ಕೆ ಉಗ್ರರು ಯೋಜನೆ ರೂಪಿಸಿದ್ದರು. ಸಂಚಿನ ಬಗ್ಗೆ ಎನ್‌ಐಎ ಹೆಚ್ಚಿನ ತನಿಖೆ ನಡೆಸಲು ಶ್ರೀಲಂಕಾಕ್ಕೆ ತೆರಳಲು ಉದ್ದೇಶಿಸಿದೆ. ಈ ಬಗ್ಗೆ ಅನುಮತಿ ಕೋರಿ ವಿದೇಶಾಂಗ ಸಚಿವಾಲಯ, ಗೃಹ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ ಅನುಮತಿ ದೊರೆತಿಲ್ಲ.
Advertisement