ಮಿತವ್ಯಯವೇ ಸರ್ಕಾರದ ಪಾಲಿಸಿ

ವಿಮಾನದಲ್ಲಿ ಪ್ರಥಮ ದರ್ಜೆ ಟಿಕೆಟ್ ಪ್ರಯಾಣ ಮಾಡುವಂತಿಲ್ಲ, ಪಂಚತಾರ ಹೋಟೆಲ್‌ಗಳಲ್ಲಿ ಸಭೆ, ಸಮಾರಂಭ ನಡೆಸುವಂತಿಲ್ಲ...
ಮಿತವ್ಯಯವೇ ಸರ್ಕಾರದ ಪಾಲಿಸಿ
Updated on: 

ನವದೆಹಲಿ: ವಿಮಾನದಲ್ಲಿ ಪ್ರಥಮ ದರ್ಜೆ ಟಿಕೆಟ್ ಪ್ರಯಾಣ ಮಾಡುವಂತಿಲ್ಲ, ಪಂಚತಾರ ಹೋಟೆಲ್‌ಗಳಲ್ಲಿ ಸಭೆ, ಸಮಾರಂಭ ನಡೆಸುವಂತಿಲ್ಲ, ಖಾಲಿ ಬಿದ್ದಿರುವ ಯಾವುದೇ ಹುದ್ದೆಯನ್ನು ಭರ್ತಿಮಾಡುವಂತಿಲ್ಲ!
ಆರ್ಥಿಕ ಬೆಳಣಿಗೆಗೆ ಅಡ್ಡಿಯಾಗಿರುವ ವಿತ್ತೀಯ ಕೊರತೆಗೆ ಲಗಾಮು ಹಾಕಲು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಿಗಳಿಗಾಗಿ ಪ್ರಕಟಿಸಿದ ಹೊಸ ಮಿತವ್ಯಯ ಕ್ರಮಗಳಿವು, ವಿತ್ತೀಯನ್ನು ಜಿಡಿಪಿಯ ಶೇ.4.1 ರಷ್ಟಕ್ಕೆ ಇಳಿಸುವ ಗುರಿ ಇಟ್ಟುಕೊಂಡಿರುವ ಸರ್ಕಾರ ಈ ನಿರ್ಧಾರಗಳನ್ನು ಪ್ರಕಟಿಸಿದೆ. ಸರ್ಕಾರದ ಹೊಸ ನಿಯಮಾವಳಿಯಂತೆ ವಿವೇಚನಾಧಿರದ ಮೇಲೂ ಮಿತಿ ಬೀಳಲಿದೆ, ಜತೆಗೆ ವಿಡಿಯೋ ಕಾನ್ಫರೆನ್ಸ್‌ನಂಥ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಬಳಸುವಂತೆಯೂ ಸೂಚಿಸಲಾಗಿದೆ.

ಸೇನೆಗಿಲ್ಲ ಮಿತವ್ಯಯದ ಬಿಸಿ
ಸದ್ಯ ಹೊಸ ಕಾರು ಖರೀದಿ ಪ್ರಸ್ತಾಪಕ್ಕೆ ಒಪ್ಪಿಗೆ ಸಿಗುವುದಿಲ್ಲ. ಆದರೆ, ಇದು ಸೇನೆಗೆ ಅನ್ವಯಿಸಲ್ಲ. ಅರೆಸೇನಾ ಪಡೆ, ಭದ್ರತಾ ಸಂಸ್ಥೆಗಳ ಕಾರ್ಯನಿರ್ವಹಣೆಗೆ ಅಗತ್ಯ ವಾಹನ ಖರೀದಿಗೆ ಯಾವುದೇ ಅಡ್ಡಿ ಇಲ್ಲ.

ಯಾಕೆ?
ವಿತ್ತೀಯ ಕೊರತೆ ತಗ್ಗಿಸಲು ಹಾಗೂ ಸರ್ಕಾರದ ಕಾರ್ಯರ್ನಿಹಣೆಯ ಮೇಲೆ ಯಾವುದೇ ಪರಿಣಾಮ ಬೀಳದಂತೆ ಹಣಕಾಸು ಶಿಸ್ತಿಗೆ ಪ್ರೋತ್ಸಾಹ ನೀಡುವುದು.

ವಿವೇಚನಾಧಿಕಾರ ಕಡಿತ
ವಿವೇಚನಾಧಿಕಾರದ ವೆಚ್ಚಕ್ಕೆ ಶೇ.10ರಷ್ಟು ಕತ್ತರಿ ಬೀಳಲಿದೆ. ಆದರೆ ಇದು ಸಾಲದ ಮೇಲಿನ ಬಡ್ಡಿ, ಸಾಲ ಮರುಪಾವತಿ, ರಕ್ಷಣಾ ಬಂಡವಾಳ, ವೇತನ, ಪಿಂಚಣಿಗಳು ಮತ್ತು ರಾಜ್ಯಗಳಿಗೆ ನೀಡುವ ಅನುದಾನಕ್ಕೆ ಅನ್ವಯ ಆಗುವುದಿಲ್ಲ.

ಏನೇನು ಕ್ರಮ?
ಹೊಸ ಹುದ್ದೆಗಳ ಸೃಷ್ಟಿಗೆ ಪೂರ್ಣ ನಿಷೇಧ, ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಷ್ಟೇ ವರ್ಷದಿಂದ ಖಾಲಿ ಬಿದ್ದಿರುವ ಹುದ್ದೆಗಳ ಭರ್ತಿ.

ವಿತ್ತೀಯ ಕೊರತೆ ತಗ್ಗಿಸಲು ಸರ್ಕಾರದ ಕ್ರಮ
ಹೊಸ ವಾಹನಗಳ ಖರೀದಿಗೆ ನಿಷೇಧ. ಅವಕಾಶವಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕವೇ ಸಂವಾದ.

ಅಧಿಕಾರಿಗಳು ವಿಮಾನದಲ್ಲಿ ಪ್ರಥಮ ದರ್ಜೆಯ ಸೀಟ್‌ನಲ್ಲಿ ಪ್ರಯಾಣಿಸುವಂತಿಲ್ಲ.

ದೇಶಿ ಮತ್ತು ಅಂತರಾಷ್ಟ್ರೀಯ ವಿಮಾನ ಪ್ರಯಾಣದ ವೇಳೆ ಜತೆಗಿರುವ ವ್ಯಕ್ತಿಗೆ ಉಚಿತ ಟಿಕೆಟ್ ಸೌಲಭ್ಯ ಇಲ್ಲ.

ಅನಿವಾರ್ಯವೆನಿಸುವ ವಿಚಾರ ಸಂಕಿರಣಗಳು, ಸಮಾವೇಶಗಳ ಆಯೋಜನೆಗಷ್ಟೇ ಅವಕಾಶ. ವ್ಯಾಪಾರಕ್ಕೆ ಉತ್ತೇಜನ ನೀಡುವ ವಸ್ತು ಪ್ರದರ್ಶ, ವಿಚಾರ ಸಂಕಿರಣಗಳು, ಸಮಾವೇಶಗಳಿಗೆ ಅವಕಾಶ ಇಲ್ಲ.


















Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com