ಯುಜಿಸಿ ವಿಸರ್ಜನೆಗೆ ಸಮಿತಿ ಶಿಫಾರಸು

ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲು ಮಾಡಿದ ಕೇಂದ್ರ ಸರ್ಕಾರ ಇದೀಗ ಯುಜಿಸಿಯತ್ತ ದೃಷ್ಟಿ ಹಾಯಿಸಿದೆ...
ಯೋಜನಾ ಆಯೋಗ
ಯೋಜನಾ ಆಯೋಗ

ನವದೆಹಲಿ: ಯೋಜನಾ ಆಯೋಗವನ್ನು ನೀತಿ ಆಯೋಗವನ್ನಾಗಿ ಬದಲು ಮಾಡಿದ ಕೇಂದ್ರ ಸರ್ಕಾರ ಇದೀಗ ಯುಜಿಸಿಯತ್ತ ದೃಷ್ಟಿ ಹಾಯಿಸಿದೆ.
1953ರಲ್ಲಿ ವಿಶ್ವ ವಿದ್ಯಾನಿಲಯ ಧನ ಸಹಾಯ ಆಯೋಗವನ್ನು ಸಂಪೂರ್ಣವಾಗಿ ರದ್ದು ಮಾಡಿ ಹೊಸ ಸಂಸ್ಥೆಯನ್ನು ರಚಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ರಚಿಸಿದ ಸಮಿತಿ ಶಿಫಾ ರಸು ಮಾಡಿದೆ. ಯುಜಿಸಿಯ ಮಾಜಿ ಅಧ್ಯಕ್ಷ ಹರಿ ಗೌತಮ್ ನೇತೃತ್ವದ ಸಮಿತಿ ಸಂಸ್ಥೆ ತನ್ನ ಮೂಲ ಉದ್ದೇಶಗಳನ್ನೇ ಮರೆತಿದೆ. ಹೀಗಾಗಿ, ಅದನ್ನು
ಪುನಾರಚಿಸುವುದಕ್ಕಿಂತ ವಿಸರ್ಜಿಸುವುದೇ ಉತ್ತಮ. ಜತೆಗೆ ಬದಲಾಗಿರುವ ಶೈಕ್ಷಣಿಕ ಲೋಕವನ್ನು ಸಮರ್ಥವಾಗಿ ನಿಭಾಯಿಸಲು ಅಸಮರ್ಥವಾಗಿದೆ
ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಹೀಗಾಗಿ, ರಾಷ್ಟ್ರೀಯ ಉನ್ನತ ಶಿಕ್ಷಣ ಪ್ರಾಧಿಕಾರ ರಚನೆ ಮಾಡುವುದು ಸೂಕ್ತ ಎಂದು ಅದು ಪ್ರತಿಪಾದಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com