
ನವದೆಹಲಿ: ಗಡಿನಿಯಂತ್ರಣ ರೇಖೆಯಿಂದ 3 ಕಿಮೀ ದೂರದಲ್ಲಿ ಲಷ್ಕರ್ ಸಂಘಟನೆಯ ಶಿಬಿರಗಳು ಇವೆ ಎಂದು ಕೆಲ ದಿನಗಳ ಹಿಂದೆ ಬಿಎಸ್ ಎಫ್ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.
ಅದಕ್ಕೆ ಪೂರಕವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ನವದೆಹಲಿಯಲ್ಲಿ ಉಗ್ರ ಸಂಘಟನೆಗಳು ದಾಳಿ ಎಸಗಲಿವೆ. ಪ್ರಮುಖ ನಾಯಕರ ಹತ್ಯೆಗೆ ಹಾಗೂ ಸೇನಾ ನೆಲೆಗಳ ಮೇಲೆ ದಾಳಿಗೆ ಅವು ಸಂಚು ರೂಪಿಸಿವೆ ಎಂದು ಇಂಟೆಲಿಜೆನ್ಸ್ ಬ್ಯೂರೋ ವರದಿ ನೀಡಿದೆ.
ಕಣಿವೆ ರಾಜ್ಯದಲ್ಲಿ ಮತ್ತೊಮ್ಮೆ ಅಕಾಲಿಕ ಮಳೆ ಮತ್ತು ಪ್ರವಾಹ ಉಂಟಾಗಿರುವುದರಿಂದ ಸೇನಾ ಪಡೆಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿರುವುದರಿಂದ ಉಗ್ರ ಸಂಘಟನೆಗಳಿಗೂ ಪರಿಸ್ಥಿತಿ ಅನುಕೂಲಕರವಾಗಿಯೇ ಇದೆ. ಹೀಗಾಗಿ, ಗರಿಷ್ಠ ಪ್ರಮಾಣದ ಎಚ್ಚರಿಕೆಯಿಂದ ಇರಬೇಕಾಗಿದೆ ಎಂದು ಇಂಟೆಲಿಜೆನ್ಸ್ ಬ್ಯೂರೋ ಸೂಚಿಸಿದೆ.
Advertisement