ಎವರೆಸ್ಟ್ ನಲ್ಲಿ ಭಾರತದ ಸ್ವಚ್ಛ ಸಾಹಸ

ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನ ಅಕ್ಷರಶಃ ಜನಪ್ರಿಯತೆಯ ಶಿಖರಕ್ಕೇರಲಿದೆ. ಎವರೆಸ್ಟ್ ನ...
ಎವರೆಸ್ಟ್ ಶಿಖರದಲ್ಲಿ ಸ್ವಚ್ಛ ಭಾರತ ಅಭಿಯಾನ
ಎವರೆಸ್ಟ್ ಶಿಖರದಲ್ಲಿ ಸ್ವಚ್ಛ ಭಾರತ ಅಭಿಯಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವಚ್ಛ ಭಾರತ ಅಭಿಯಾನ ಅಕ್ಷರಶಃ ಜನಪ್ರಿಯತೆಯ ಶಿಖರಕ್ಕೇರಲಿದೆ. ಎವರೆಸ್ಟ್ ನ ತುದಿಗೂ ಇನ್ನು ಅಭಿಯಾನನ ಲಗ್ಗೆ ಹಾಕಲು ಮುಂದಾಗಿದೆ. ದಶಕಗಳಿಂದ ಪರ್ವತಾರೋಹಿಗಳು ಅಲ್ಲಿ ಬಿಟ್ಟು ಬಂದಿರುವ 4 ಸಾವಿರ ಕೆಜಿಗೂ ಅಧಿಕ ಪ್ರಮಾಣದ ಕಸ ಕೆಳತರಲು ಅಭಿಯಾನಕೈಗೊಳ್ಳಲಾಗುತ್ತಿದೆ. ಭಾರತೀಯ ಸೇನಾ ಚಾರಣ ವಿಭಾಗದ 34 ಅಧಿಕಾರಿಗಳು ಮತ್ತು ಸಿಬ್ಬಂದಿ ಇಂಥ ಸಾಹಸಕ್ಕೆ ಮುಂದಾಗಿದ್ದಾರೆ.
50 ವರ್ಷ: ಭಾರತದ ಲೆ.ಕ.ಎಂ.ಎಸ್.ಕೋಹ್ಲಿ ನೇತೃತ್ವದ ತಂಡ ಎವರೆಸ್ಟ್ ಏರಿ 50 ವರ್ಷಗಳು ಪೂರ್ತಿಯಾಗಿವೆ. ಈ ಸಾಧನೆಯ ಸ್ಮರಣೆಗಾಗಿ ಸೇನೆ ಈ ಸಾಹಸಕ್ಕೆ ಮುಂದಾಗಿದೆ. ಅದಕ್ಕಾಗಿ ಒಂದು ವರ್ಷದಿಂದ ಕಠಿಣ ತರಬೇತಿ ಪಡೆದುಕೊಂಡಿದ್ದಾರೆ.
ಏನು ಮಾಡಲಿದೆ? ಶಿಖರ ದಲ್ಲಿರುವ ಬಾಟಲಿ, ಪ್ಲಾಸ್ಟಿಕ್, ಟೆಂಟ್, ಸ್ಲೀಪಿಂಗ್ ಬ್ಯಾಗ್, ಆಕ್ಸಿಜನ್ ಸಿಲಿಂಡರ್‍ಗಳನ್ನು ತಂಡ ಕೆಳಕ್ಕೆ ತರಲಿದೆ. ಜತೆಗೆ ಶಿಖರದಲ್ಲಿ ಅಸುನೀಗಿದವರ ಮೃತ ದೇಹಗಳನ್ನೂ ಹೊತ್ತು ತರಲಿದ್ದಾರೆ.

ಯಾವಾಗ? ಮೇ ಮಧ್ಯಭಾಗದಿಂದ ಮೇ.ರಣವೀರ್ ಸಿಂಗ್ ಜುಮ್ವಾವಲ್ ನೇತೃತ್ವದ ತಂಡ ಅಭಿಯಾನ ಆರಂಭಿಸಲಿದೆ. ಏ.4ರಂದು ತಂಡ ಕಠ್ಮಂಡುವಿಗೆ ತೆರಳಲಿದೆ. ಸೇನಾ ಸಿಬ್ಬಂದಿಗೆ ಸ್ಥಳೀಯ ಶೆರ್ಪಾಗಳು ಎವರೆಸ್ಟ್ ಸ್ವಚ್ಛತಾ ಅಭಿಯಾನನದಲ್ಲಿ ನೆರವು ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com