ಸಹ ಪೈಲಟ್ ಉದ್ದೇಶಪೂರ್ವಕವಾಗಿ ಜರ್ಮನ್ ವಿಂಗ್ಸ್ ವಿಮಾನವನ್ನು ಪರ್ವತಕ್ಕೆ ಡಿಕ್ಕಿ ಹೊಡೆಸಿದ!

ಜರ್ಮನ್ ವಿಂಗ್ಸ್ ವಿಮಾನ ದುರಂತಕ್ಕೆ ಸಹ ಪೈಲೆಟ್ ಖಿನ್ನತೆ ಕಾರಣವಾಗಿದ್ದು, ಉದ್ದೇಶ ಪೂರ್ವಕವಾಗಿ ವಿಮಾನದ ವೇಗವನ್ನು ಹೆಚ್ಚಿಸಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.
ಜರ್ಮನ್ ವಿಂಗ್ಸ್ ವಿಮಾನ ದುರಂತ ಸ್ಥಳ
ಜರ್ಮನ್ ವಿಂಗ್ಸ್ ವಿಮಾನ ದುರಂತ ಸ್ಥಳ
Updated on

ಪ್ಯಾರಿಸ್: ಜರ್ಮನ್ ವಿಂಗ್ಸ್ ವಿಮಾನ ದುರಂತಕ್ಕೆ ಸಹ ಪೈಲೆಟ್ ಖಿನ್ನತೆ ಕಾರಣವಾಗಿದ್ದು, ಉದ್ದೇಶ ಪೂರ್ವಕವಾಗಿ ವಿಮಾನದ ವೇಗವನ್ನು ಹೆಚ್ಚಿಸಿರುವುದಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಿದೆ.

ಇದೀಗ ಸಿಕ್ಕಿರುವ ಎರಡನೇ ಕಪ್ಪು ಪೆಟ್ಟಿಗೆಯನ್ನು ಪರಿಶೀಲಿಸಿದ ತನಿಖಾ ತಂಡಕ್ಕೆ ವಿಮಾನ ದುರಂತಕ್ಕೆ ಮತ್ತಷ್ಟು ಪುರಾವೆಗಳು ಸಿಕ್ಕಿದ್ದು, ವಿಮಾನದ ಸಹ ಪೈಲಟ್‌ ಆ್ಯಂಡ್ರಿಯಾಸ್‌ ಲುಬಿಟ್ಜ್‌ (28) ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮತ್ತು ವಿಮಾನವನ್ನು ಸ್ವಯಂಚಾಲಿತ ಸ್ಥಿತಿಯಲ್ಲಿಟ್ಟಿದ್ದ ಎಂಬುದು ತಿಳಿದುಬಂದಿದೆ.

ನಿನ್ನೆ ಪತ್ತೆಯಾದ ಎರಡನೇ ಬ್ಲಾಕ್‌ ಬಾಕ್ಸ್‌ನಲ್ಲಿ ಸಂಗ್ರಹವಾಗಿರುವ ಧ್ವನಿ ದಾಖಲೆಗಳನ್ನು ಶುಕ್ರವಾರ ಅಧ್ಯಯನ ನಡೆಸಿರುವ ತನಿಖಾ ತಂಡಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿದೆ. ಸಹಪೈಲೆಟ್‌ ಎ320 ವಿಮಾನವನ್ನು ಅತಿ ವೇಗವಾಗಿ ಆಲ್ಫ್ಸ್‌ ಪರ್ವತಕ್ಕೆ ಡಿಕ್ಕಿ ಹೊಡೆಸಿರುವ ಭಯಾನಕ ಮಾಹಿತಿ ಮೊದಲ ಬ್ಲಾಕ್ಸ್‌ನ ಆಡಿಯೋದಿಂದಲೇ ಪತ್ತೆಯಾಗಿತ್ತು.

ಕ್ಯಾಪ್ಟನ್ ಅನ್ನು ಒತ್ತಾಯವಾಗಿ ಕಾಕ್‌ಪಿಟ್‌ನಿಂದ ಆಚೆಗೆ ಕಳುಹಿಸಿದ ಸಹಪೈಲಟ್ ಆಂಡ್ರ್ಯೂ ಗುಂಟೇರ್, ವಿಮಾನವನ್ನು ಆಲ್ಫ್ಸ್‌ ಪರ್ವತದ ಕಡೆಗೆ ಗುರಿಮಾಡಿ ಆಟೋಮೆಟಿಕ್‌ ಪೈಲೆಟ್ ಮೋಡ್‌ನಲ್ಲಿಟ್ಟು ವೇಗವನ್ನು ವೃದ್ಧಿಸಿದ್ದ ಎಂದು ಎರಡನೇ ಬ್ಲಾಕ್ ಬಾಕ್ಸ್‌ನ ಆಡಿಯೋ ಆಲಿಸಿರುವ ತನಿಖಾಧಿಕಾರಿಗಳು ಹೇಳಿದ್ದಾರೆ.

ಸಹಪೈಲಟ್‌ನ ಹುಚ್ಚಾಟದಿಂಧ ಜರ್ಮನ್ ವಿಂಗ್ಸ್ ಏರ್‌ವೇಸ್‌ಗೆ ಸೇರಿದ ವಿಮಾನದ ಆರು ಸಿಬ್ಬಂದಿಯೂ ಸೇರಿದಂತೆ 150 ಪ್ರಯಾಣಿಕರು ದುರ್ಘಟನೆಯಲ್ಲಿ ಮೃತಪಟ್ಟಿದ್ದರು. ಕಳೆದ ನಾಲ್ಕು ದಶಕಗಳಲ್ಲೇ ಫ್ರಾನ್ಸ್‌ನ ಅತಿದೊಡ್ಡ ವಿಮಾನ ದುರಂತವೆಂದು ಈ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com