ರಾಜ್ಯಪಾಲರ ನೇಮಕ ಶೀಘ್ರ

ಸಂಪುಟ ಪುನಾರಚನೆ ವದಂತಿ ಬೆನ್ನಲ್ಲೇ 10 ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಲು ಕೇಂದ್ರ ಮುಂದಾಗಿದೆ. ಅಸ್ಸಾಂ, ಹಿಮಾಚಲಪ್ರದೇಶ, ಮೇಘಾಲಯ,...
ಮೋದಿ ಸಂಪುಟ
ಮೋದಿ ಸಂಪುಟ

ನವದೆಹಲಿ: ಸಂಪುಟ ಪುನಾರಚನೆ ವದಂತಿ ಬೆನ್ನಲ್ಲೇ 10 ರಾಜ್ಯಗಳಿಗೆ ರಾಜ್ಯಪಾಲರನ್ನು ನೇಮಿಸಲು ಕೇಂದ್ರ ಮುಂದಾಗಿದೆ. ಅಸ್ಸಾಂ, ಹಿಮಾಚಲಪ್ರದೇಶ, ಮೇಘಾಲಯ,
ಮಿಜೋರಾಮï, ಮಣಿಪುರ, ಬಿಹಾರ, ತ್ರಿಪುರಾ, ಪಂಜಾಬ್ ಮತ್ತು ತೆಲಂಗಾಣದಲ್ಲಿ ರಾಜ್ಯಪಾಲರ ಹುದ್ದೆಗಳು ಖಾಲಿ ಇವೆ. ಇದರ ಜತೆಗೆ ಪುದುಚೇರಿಯಲ್ಲಿನ ಲೆಫ್ಟಿನೆಂಟ್ ಗವರ್ನರ್ ಹುದ್ದೆಯೂ ಭರ್ತಿಯಾಗಿಲ್ಲ. ಇದರ ಜತೆಗೆ ಕೇಂದ್ರ ಸಂಪುಟದಲ್ಲಿ 75 ಹಾಗೂ ಅದಕ್ಕಿಂತ ಹೆಚ್ಚು ವಯೋಮಿತಿ ಹೊಂದಿರುವವರನ್ನು ಕೈಬಿಟ್ಟು, ಅವರನ್ನು ರಾಜ್ಯಪಾಲರ ಹುದ್ದೆಗೆ ನೇಮಿಸುವ ಇಂಗಿತ ಮೋದಿ ಸರ್ಕಾರದ್ದು. ಹಾಲಿ ಕೇಂದ್ರ ಸಚಿವೆ ನಜ್ಮಾ ಹೆಪ್ತುಲ್ಲಾರನ್ನು ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಹೆಚ್ಚಿದೆ. ಪಶ್ಚಿಮ ಬಂಗಾಳ, ಹರ್ಯಾಣ ರಾಜ್ಯಪಾಲರಿಗೆ ಹೆಚ್ಚುವರಿಯಾಗಿ 3 ರಾಜ್ಯಗಳ ಹೊಣೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com