
ನವದೆಹಲಿ: ಕೇವಲ ನಾಲ್ಕೇ ನಾಲ್ಕು ತಿಂಗಳು. ಒಂದು ಗ್ರಾಮಕ್ಕೆ ಗ್ರಾಮವೇ ಸಂಪೂರ್ಣ ಬದಲು...ಅಂದು ಕನಿಷ್ಠ ಮೂಲಸೌಕರ್ಯಗಳನ್ನೂ ಕಾಣದೇ ಕುಗ್ಗಿಹೋಗಿದ್ದ ಕುಗ್ರಾಮ ಈಗ ಪವಾಡಸದೃಶ ರೀತಿಯಲ್ಲಿ ಅಭಿವೃದ್ಧಿ ಕಂಡು ಕಣ್ಣು ಕುಕ್ಕುತ್ತಿದೆ. ಇದಕ್ಕೆಲ್ಲ `ದೇವರ' ದಯೆಯೇ ಕಾರಣ ಎನ್ನುತ್ತಿದ್ದಾರೆ ಗ್ರಾಮಸ್ಥರು. ಹೌದು. ನಾಲ್ಕು ತಿಂಗಳ ಹಿಂದೆ ಅಕ್ಷರಶಃ ಕೊಳಗೇರಿಯಂತಿದ್ದ ಆಂಧ್ರದ ಪುಟ್ಟಂರಾಜು ಖಂಡ್ರಿಗ ಎಂಬ ಗ್ರಾಮವು `ಕ್ರಿಕೆಟ್ ದೇವರ'
ದರ್ಶನವಾದ ಬಳಿಕ ಸಂಪೂರ್ಣ ಬದಲಾಗಿ ಹೋಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ `ಸಂಸದರ ಆದರ್ಶ ಗ್ರಾಮ ಯೋಜನೆ'ಯನ್ವಯ ಈ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದ ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕನಿಷ್ಠ ಅವಧಿಯಲ್ಲೇ ಪುಟ್ಟಂರಾಜು ಖಂಡ್ರಿಗವನ್ನು ಅಚ್ಚರಿ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದಾರೆ.
ಎಂಪಿಲಾಡ್ ನಿಧಿಯನ್ನು ಸಂಪೂರ್ಣವಾಗಿ ಸದ್ಬಳಕೆ ಮಾಡಿಕೊಳ್ಳುವ ಮೂಲಕ ಹಾಗೂ ಪ್ರಾಮಾಣಿಕವಾಗಿ ಒಂದು ಗ್ರಾಮಕ್ಕೆ ಗ್ರಾಮವನ್ನೇ ವಿಸ್ಮಯವೆಂಬಂತೆ ಬದಲಾಯಿಸುವ ಮೂಲಕ ಸಚಿನ್ ತೆಂಡೂಲ್ಕರ್ ಅವರು ಇತರೆ ಸಂಸದರಿಗೆ `ಆದರ್ಶ'ಪ್ರಾಯರಾಗಿದ್ದಾರೆ
Advertisement