
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಮೇ 26ಕ್ಕೆ ಒಂದು ವರ್ಷ ಪೂರ್ತಿಯಾಗಲಿದೆ.
ಅದಕ್ಕೆ ಪೂರಕವಾಗಿ ಇಂಡಿಯಾ ಟುಡೇ ಮತ್ತು ಸಿಸಿರೋ ದೇಶಾದ್ಯಂತ ಸಮೀಕ್ಷೆ ನಡೆಸಿದೆ. ಅದರಲ್ಲಿ ಪ್ರಧಾನಿ ಮೋದಿಯವರೇ ಅತ್ಯುತ್ತಮ ಪ್ರಧಾನಿ ಎಂಬ ಅಭಿಪ್ರಾಯ
ವ್ಯಕ್ತವಾಗಿದೆ. ಒಂದು ವರ್ಷದ ಅವಧಿಯಲ್ಲಿ ಪ್ರಧಾನಿಯಾಗಿ ಮೋದಿಯವರ ಸಾಧನೆ ಅತ್ಯುತ್ತಮ ಎಂದು ಶೇ.22ರಷ್ಟು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇವಲ ಶೇ.10 ಮಂದಿ ಮಾತ್ರ 10 ತಿಂಗಳಲ್ಲಿ ಕೇಂದ್ರ ಸರ್ಕಾರದ ಸಾಧನೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮೂರು ದಿನಗಳ ಮಹತ್ವಪೂರ್ಣವಾದ ಬಿಜೆಪಿ ಕಾರ್ಯಕಾರಿಣಿ ನಡೆಯು ತ್ತಿರುವಾಗಲೇ ಈ ಸಮೀಕ್ಷೆ ನಡೆದಿರುವುದು ಗಮನಾರ್ಹ. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ವರ್ಚಸ್ಸು ಹೆಚ್ಚಿರುವುದನ್ನು ಜನರು ಕೊಂಡಾಡಿದ್ದಾರೆ. ಶೇ.34 ಮಂದಿ ಪ್ರಧಾನಿ ಇತರ ರಾಷ್ಟ್ರಗಳ ಜತೆಗೆ ಸಂಬಂಧ ವೃದ್ಧಿಗೊಳಿಸುವ ವೇಳೆ ರಾಜತಾಂತ್ರಿಕ ಪ್ರೌಡಿsಮೆ ಮೆರೆದಿದ್ದಾರೆ ಎಂದು ಶ್ಲಾಘಿಸಿದ್ದಾರೆ. ಶೇ.13 ಮಂದಿ ದೇಶದಲ್ಲಿನ ಭ್ರಷ್ಟಾಚಾರ ನಿಗ್ರಹ ಕೇಂದ್ರ ಸರ್ಕಾರದ ಸಾಧನೆ ಎಂದಿದ್ದಾರೆ
ಪ್ರಧಾನಿ ಯಾವುದನ್ನು ಪ್ರತಿನಿಧಿಸುತ್ತಿದ್ದಾರೆ?
ಉತ್ತಮ ಆಡಳಿತ ಮತ್ತು ಅಭಿವೃದ್ಧಿ -52%
ನಿರೀಕ್ಷೆಗಿಂತ ಉತ್ತಮ ಆಡಳಿತ ನೀಡಿದೆ -69%
ಹಿಂದೂ ರಾಷ್ಟ್ರೀಯ ವಾದ -16%
ನಿರೀಕ್ಷೆಗಿಂತ ಉತ್ತಮ ಆಡಳಿತ ನೀಡಿಲ್ಲ -25%
ತಕ್ಷಣವೇ ಚುನಾವಣೆ ನಡೆದರೆ ?
ಕಳೆದ ಏಪ್ರಿಲ್‍ನಲ್ಲಿ ಲೋಕಸಭೆ ಚುನಾವಣೆ ನಡೆದು, ಬಿಜೆಪಿ 282 ಸ್ಥಾನ ಗೆದ್ದಿತ್ತು. ಆದರೆ ತಕ್ಷಣವೇ ಚುನಾವಣೆ ನಡೆದರೆ 27 ಸ್ಥಾನಗಳು ನಷ್ಟವಾಗತ್ತದೆ. ಅಂದರೆ 255 ಸ್ಥಾನಗಳು ಮಾತ್ರ ಲಭಿಸಲಿವೆ. ಕಾಂಗ್ರೆಸ್‍ಗೆ 9 ಸ್ಥಾನ ಹೆಚ್ಚುವರಿಯಾಗಿ ಲಭಿಸುವ ಸಾಧ್ಯತೆ ಇದೆ.
Advertisement