ಕೌಶಲವಿದ್ದರಷ್ಟೇ ಸರ್ಕಾರಿ ಕೆಲಸ!

`ಹೆಚ್ಚು ಅಂಕ ಗಳಿಸಿ ಪದವಿ ಪಡೆದರೆ ಸಾಕು, ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ' ಎಂದು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಇನ್ನು ಮುಂದೆ ನೀವು...
ರಾಜೀವ್ ಪ್ರತಾಪ್ ರೂಡಿ
ರಾಜೀವ್ ಪ್ರತಾಪ್ ರೂಡಿ

ನವದೆಹಲಿ: `ಹೆಚ್ಚು ಅಂಕ ಗಳಿಸಿ ಪದವಿ ಪಡೆದರೆ ಸಾಕು, ಸರ್ಕಾರಿ ಕೆಲಸ ಸಿಕ್ಕೇ ಸಿಗುತ್ತದೆ' ಎಂದು ಅಂದುಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿ ಕೇಳಿ. ಇನ್ನು ಮುಂದೆ ನೀವು ಅಂದುಕೊಂಡಂತೆ ನಡೆಯುವುದಿಲ್ಲ. ಸರ್ಕಾರಿ ಉದ್ಯೋಗ ಬೇಕೆಂದರೆ ಪದವಿ ಮಾತ್ರ ಸಾಲದು, ಕೌಶಲ ಪ್ರಮಾಣಪತ್ರವೂ ಬೇಕು. ಇದು ಕೇಂದ್ರ ಸರ್ಕಾರದ ಚಿಂತನೆ. ಪ್ರಧಾನಿ ನರೇಂದ್ರ ಮೋದಿ ಅವರ `ಮೇಕ್ ಇನ್ ಇಂಡಿಯಾ ' ಕನಸನ್ನು ನನಸಾಗಿಸಬೇಕೆಂದರೆ ದೇಶದಲ್ಲಿ ಬಲಿಷ್ಠ ಹಾಗೂ ಕೌಶಲ ಯುಕ್ತ ಜನಶಕ್ತಿ ಬೇಕೇ ಬೇಕು . ಹೀಗಾಗಿ ಕೇಂದ್ರ ಸರ್ಕಾರದ ಹುದ್ದೆಗಳ ನೇಮಕ ಪ್ರಕ್ರಿಯೆ  ವೇಳೆ ಅಭ್ಯರ್ಥಿಗಳಿಗೆ ಕೌಶಲ ಪ್ರಮಾಣ ಪತ್ರ ಕಡ್ಡಾಯಗೊಳಿಸಲು  ಸರ್ಕಾರ ಮುಂದಾಗಿದೆ. 2016ರಿಂದ ನೇಮಕ ಪ್ರಕ್ರಿಯೆಯನ್ನೇ ಬದಲಿಸಿ ಗುರಿ ಸಾಧಿಸುವುದು ಮೋದಿ ಸರ್ಕಾರದ ಚಿಂತನೆ.

ಯೋಜನೆ, ಗುರಿಗಳು

  •  ದಕ್ಷಿಣ ಕೊರಿಯಾದಲ್ಲಿ ಶೇ.96, ಜಪಾನ್ ನಲ್ಲಿ ಶೇ.80, ಜರ್ಮನಿಯಲ್ಲಿ ಶೇ.75, ಬ್ರಿಟನ್‍ನಲ್ಲಿ ಶೇ.70ರಷ್ಟು ಕೌಶಲಭರಿತನೌಕರರಿದ್ದಾರೆ. ಆದರೆ ಭಾರತದಲ್ಲಿ ಇವರ ಸಂಖ್ಯೆ ಶೇ.2 ಮಾತ್ರ
  •  ಡಿಸೆಂಬರ್ 2016ರ ಬಳಿಕ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆ(ಪಿಎಸ್‍ಯು)ಗಳ ನೇಮಕ ನಿಯಮಗಳು ಬದಲಾಗಲಿವೆ.
  • ಅಭ್ಯರ್ಥಿಗಳ ಅರ್ಹತಾ ಮಾನದಂಡದಲ್ಲಿ ಕೌಶಲವು ಪ್ರಮುಖ ಪಾತ್ರ ವಹಿಸಲಿವೆ
  •  ರಾಜ್ಯ ಸರ್ಕಾರಗಳು ಮತ್ತು ರಾಜ್ಯದ ಪಿಎಸ್‍ಯುಗಳು ಕೂಡ ನೇಮಕ ಪ್ರಕ್ರಿಯೆಯಲ್ಲಿ ಇಂತಹ ಬದಲಾವಣೆಗೆ ಉತ್ತೇಜನ ನೀಡಬಹುದು
  •  ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ರಾಷ್ಟ್ರೀಯ ಸೌರ ಮಿಷನ್, ಸ್ವಚ್ಛ ಭಾರತ ಅಭಿಯಾನದ ಮಾದರಿಯಲ್ಲೇ ಕೌಶಲಾಭಿವೃದ್ಧಿ ಗುರಿಯನ್ನೂ ಹೊಂದಲಾಗುತ್ತದೆ
  •  ಎಲ್ಲ ತರಬೇತಿ ಮತ್ತು ಶೈಕ್ಷಣಿಕ ಕೋಸ್ರ್ ಗಳನ್ನು ಕೌಶಲ ವಿದ್ಯೆಯ ಚೌಕಟ್ಟಿನೊಳಗೆ ತರಲು ಯತ್ನಿಸಲಾಗುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com