
ನವದೆಹಲಿ: ಭೂಸ್ವಾಧೀನ ವಿಧೇಯಕಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಜಾರಿ ಮಾಡಿರುವ ಮರುಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂಕಿತ ಹಾಕಿದ್ದಾರೆ. ಹಳೆ ಸುಗ್ರೀವಾಜ್ಞೆ ಅವಧಿ ಪೂರ್ಣಗೊಳ್ಳಲು ಒಂದು ದಿನ ಬಾಕಿಯಿರುವಾಗಲೇ ಈ ಸುದ್ದಿ ಹೊರಬಿದ್ದಿದೆ.
ಕೇಂದ್ರ ಸರ್ಕಾರದ ಮನವಿ ಮೇರೆಗೆ ಹೊಸ ಸುಗ್ರೀ ವಾಜ್ಞೆ ಗೆ ಮಾ.31ರಂದು ಪ್ರಣಬ್ ಸಹಿ ಹಾಕಿದ್ದಾರೆ. ರಾಜ್ಯಸಭೆಯಲ್ಲಿ ಭೂಸ್ವಾಧೀನ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತ ವಾದ ಹಿನ್ನೆಲೆಯಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರ ಕೈಗೊಂಡಿತ್ತು. ಇದು ಸರ್ಕಾರ ಹೊರಡಿಸಿರುವ 11ನೇ ಸುಗ್ರೀವಾಜ್ಞೆ ಯಾಗಿದೆ. ಇದರಲ್ಲಿ 11 ತಿದ್ದುಪಡಿ ಗಳನ್ನೂ ಸೇರಿಸಲಾಗಿದೆ. ಒಟ್ಟಿನಲ್ಲಿ ಭೂಸ್ವಾಧೀನ ವಿಧೇಯಕಕ್ಕೆ ಹೇಗಾದರೂ ಮಾಡಿ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ.
Advertisement