
ಕೈರೋ: ಈಜಿಪ್ಟ್ ನಲ್ಲಿ ಇಸ್ಲಾಮಿಕ್ ಉಗ್ರರ ಕೃತ್ಯ ದಿನೇ ದಿನೇ ಹೆಚ್ಚಾಗುತ್ತಿದ್ದು ಉಗ್ರರ ಹುಟ್ಟಡಗಿಸಲು ಈಜಿಸ್ಟ್ ಸೇನೆ ಕಾರ್ಯಾಚರಣೆ ಕೈಗೊಂಡಿದ್ದು, ಈಗಾಗಲೇ 40ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದೆ.
ಕಳೆದ ಗುರುವಾರ ಉತ್ತರ ಸಿನಾಯ್ ಪ್ರದೇಶದ ಮೇಲೆ ದಾಳಿ ನಡೆಸಿದ್ದ ಇಸ್ಲಾಮಿಕ್ ಉಗ್ರರು 15 ಸೈನಿಕರು ಮತ್ತು ಇಬ್ಬರು ನಾಗರಿಕರನ್ನು ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಶೇಖ್ ಜುವೀದ್‌ನಲ್ಲಿನ ಈಜಿಪ್ಟ್ ಸೇನೆ ಭೂ ಮತ್ತು ವಾಯು ದಾಳಿ ನಡೆಸಿ ಉಗ್ರರ ಅಡಗುದಾಣದ್ದಲ್ಲಿ ಅಡಗಿದ್ದ 40 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿ ಪ್ರತೀಕಾರ ತೀರಿಸಿಕೊಂಡಿದೆ.
ಇತ್ತೀಚೆಗೆ ಈಜಿಪ್ಟ್ ನಲ್ಲಿ ಉಗ್ರರ ಅಟ್ಟಹಾಸ ಹೆಚ್ಚುತ್ತಿದ್ದು ಏಕಾಏಕಿ ದಾಳಿ ನಡೆಸಿ ಅಮಾಯಕರ ರಕ್ತ ಹರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೇನೆ ಈ ದಾಳಿ ನಡೆಸಿದೆ ಎನ್ನಲಾಗಿದ್ದು ಈ ದಾಳಿಯಲ್ಲಿ 40 ಕ್ಕಿಂತ ಹೆಚ್ಚು ಮಂದಿ ಸಾವಿಗೀಡಾಗಿ ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
Advertisement