ಪರಿಸರ ಸಂರಕ್ಷಣೆ ಭಾರತೀಯ ಪರಂಪರೆಯ ಪ್ರಮುಖ ಅಂಶ: ಮೋದಿ

ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸುವಂತಹ ಹಕ್ಕು ಯಾರಿಗೂ ಇಲ್ಲ. ಪ್ರಕೃತಿ ಸಂರಕ್ಷಣೆ ಭಾರತೀಯ ಪರಂಪರೆಯ ಪ್ರಮುಖ ಅಂಶ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ...
ಭಾರತೀಯ ಪರಂಪರೆಯಲ್ಲಿ ಪ್ರಕೃತಿ ಸಂರಕ್ಷಣೆ ಪ್ರಮುಖವಾದುದು: ನರೇಂದ್ರ ಮೋದಿ
ಭಾರತೀಯ ಪರಂಪರೆಯಲ್ಲಿ ಪ್ರಕೃತಿ ಸಂರಕ್ಷಣೆ ಪ್ರಮುಖವಾದುದು: ನರೇಂದ್ರ ಮೋದಿ
Updated on

ನವದೆಹಲಿ: ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ನಾಶಪಡಿಸುವಂತಹ ಹಕ್ಕು ಯಾರಿಗೂ ಇಲ್ಲ. ಪರಿಸರ ಸಂರಕ್ಷಣೆ ಭಾರತೀಯ ಪರಂಪರೆಯ ಪ್ರಮುಖ ಅಂಶ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ರಾಜ್ಯದ ಪರಿಸರ ಮತ್ತು ಅರಣ್ಯ ಮಂತ್ರಿಗಳ ಎರಡು ದಿನ ಸಮ್ಮೇಳನದಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಪ್ರಕೃತಿಯನ್ನು ರಕ್ಷಿಸುವುದು ಬಹಳ ಮುಖ್ಯವಾದದ್ದು, ಪ್ರಕೃತಿ ಸಂರಕ್ಷಣೆ ಭಾರತೀಯ ಪರಂಪರೆಯ ಅಂಶಗಳಲ್ಲೊಂದಾಗಿದೆ. ಭಾರತೀಯ ಪರಂಪರೆಗಳನ್ನು ಅಭಿವೃದ್ಧಿ ಪಡಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಪ್ರಕೃತಿಯೇ ದೇವರು. ಅಂತಹ ದೇವರನ್ನು ನಾಶಪಡಿಸುವ ಹಕ್ಕು ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಪ್ರಕೃತಿ ಸಂರಕ್ಷಣೆಯಲ್ಲಿ ಅತ್ಯಂತ ಸೂಕ್ಷ್ಮತೆ ಹೊಂದಿರುವ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ. ಓರ್ವ ವ್ಯಕ್ತಿ ಮಾಡಬಹುದಾದ ಮಾಲಿನ್ಯದ ಪ್ರಮಾಣ ಭಾರತದಲ್ಲಿ ಗಣನೀಯವಾಗಿ ಕುಸಿಯುತ್ತಿದೆ. ತ್ಯಾಜ್ಯವಸ್ತುಗಳ ಬಳಕೆ ಹಾಗೂ ದೀರ್ಘಕಾಲಿಕ ಮರುಬಳಕೆ ಕುರಿತಂತೆ ಭಾರತಕ್ಕೆ ಸಾಕಷ್ಟು ಅರಿವಿದೆ. ಹಾಗಾಗಿಯೇ ಇತರೆ ದೇಶಗಳಿಂದ ಕೊಂಡುಕೊಳ್ಳುವ ಬೇಡಿಕೆಗಳು ಎದುರಾಗಿಲ್ಲ ಎಂದು ಮೋದಿ ವಿಜ್ಞಾನಭವನದಲ್ಲಿ ಹೇಳಿದ್ದಾರೆ.

ಇದೇ ವೇಳೆ ವಿವಾದಾತ್ಮಕ ಭೂ ಮಸೂದೆ ಕಾಯ್ದೆ ತಿದ್ದುಪಡಿ ಕುರಿತಂತೆ ಮಾತನಾಡಿರುವ ಮೋದಿ, ಭೂಮಸೂದೆ ಸುಗ್ರೀವಾಜ್ಞೆ ಕಾಯ್ದೆ ತಿದ್ದುಪಡಿ ಬಗ್ಗೆ ವಿರೋಧಪಕ್ಷಳು ಜನರಲ್ಲಿ ತಪ್ಪು ಕಲ್ಪನೆಗಳನ್ನು ಸೃಷ್ಟಿ ಮಾಡುತ್ತಿದೆ. ಜನರನ್ನು ದಾರಿ ತಪ್ಪಿಸುವ ವಿರೋಧ ಪಕ್ಷಗಳ ಪ್ರಯತ್ನ ದೇಶಕ್ಕೆ ಹಾನಿಯನ್ನು ತಂದೊಡ್ಡಲಿದೆ.

ಕಾಯ್ದೆಯಲ್ಲಿ ಕಾಡು ಅಥವಾ ಬುಡಕಟ್ಟು ಜನಾಂಗದ ಕುರಿತಂತೆ ಯಾವ ತಿದ್ದುಪಡಿಯೂ ಇಲ್ಲ. ತಪ್ಪು ಕಲ್ಪನೆಗಳನ್ನು ಸೃಷ್ಟಿಸುವುದೇ ನಿಮ್ಮ ರಾಜಕೀಯ ತತ್ತ್ವವಾಗಿ ಇರಬೇಕು. ಜನರಲ್ಲಿ ತಪ್ಪು ಕಲ್ಪನೆಗಳನ್ನು ಮೂಡಿಸುತ್ತಿರುವುದು ನಿಮಗೆ ಚಿಕ್ಕ ವಿಷಯವಾಗಿರಬಹುದು.ಇಂತಹ ಚಿಕ್ಕ ತಪ್ಪು ದೇಶದಲ್ಲಿ ದೊಡ್ಡ ಸಮಸ್ಯೆಯನ್ನು ಸೃಷ್ಟಿಮಾಡಲಿದೆ. ವಿರೋಧ ಪಕ್ಷಗಳು ಮಾಡುತ್ತಿರುವ ಈ ಪ್ರಯತ್ನ ತಕ್ಷಣ ಕೈ ಬಿಡಬೇಕು. ಕಾಯ್ದೆ ಕುರಿತಂತೆ ಉನ್ನತ ಮಾಹಿತಿಬೇಕಿದ್ದರೆ ಪ್ರತಿಪಕ್ಷಗಳು ಸಾರ್ವಜನಿಕ ಚರ್ಚೆ ಮಾಡಲಿ. ಇದರಿಂದ ಇತರರ ಅಭಿಪ್ರಾಯಗಳು ಹೊರಬರಲಿದೆ. ಸುಳ್ಳುಗಳಿಂದ ದೇಶವನ್ನು ಮುನ್ನಡೆಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.

ನಂತರ ಮಾತನಾಡಿದ ಪರಿಸರ ಸಚಿವ ಪ್ರಕಾಶ್ ಜವಡೇಕರ್ ಅವರು, ಪರಿಸರವನ್ನು ಸಮತೋಲನದಿಂದ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಉತ್ತಮ ತಂತ್ರಜ್ಞಾನಗಳನ್ನು ಬಳಸಿ ಪರಿಸರವನ್ನು ಕಾಪಾಡುವುದೇ ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com