ನ್ಯಾಯಾಧಿಕರಣಗಳ ಔಚಿತ್ಯ ಪ್ರಶ್ನಿಸಿದ ಪ್ರಧಾನಿ

ನ್ಯಾಯಾಧಿಕರಣಗಳ ಕಾರ್ಯ ವೈಖರಿ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ...
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ  ಪ್ರಧಾನಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ
ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪ್ರಧಾನಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ

ನವದೆಹಲಿ: ನ್ಯಾಯಾಧಿಕರಣಗಳ ಕಾರ್ಯ ವೈಖರಿ ಕುರಿತು ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ದೆಹಲಿಯಲ್ಲಿ ಆಯೋಜಿಸಲಾಗಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮತ್ತು ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ನ್ಯಾಯಾಧಿಕರಣಗಳು ನ್ಯಾಯ ನೀಡುವ ಪ್ರಕ್ರಿಯೆಗೆ ಪೂರಕ ವಾಗಿವೆಯೋ ಅಥವಾ ಅಡ್ಡಿಯಾ ಗುತ್ತಿವೆಯೋ  ಎನ್ನುವ ಕುರಿತು ಚಿಂತನೆ ನಡೆಸುವ ಅಗತ್ಯವಿದೆ ಎಂದು ಅವರು ಹೇಳಿದ್ದಾರೆ.

ಪರಾಮರ್ಶೆ ನಡೆಸಿ

ನ್ಯಾಯಾಧೀಕರಣ ಕುರಿತುಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರೇ ಪರಾಮರ್ಶಿಸಬೇಕಿದೆ. ನ್ಯಾಯಾಧಿಕರಣಗಳು ಸಮರ್ಥವಾಗಿ ಕಾರ್ಯ ನಿರ್ವಹಿಸದಿದ್ದರೆ ಇವು ಗಳ ಹಣವನ್ನು ಕೋರ್ಟ್ ಗಳನ್ನು ಬಲಪಡಿಸಲು ಬಳಕೆ ಮಾಡುವುದೊಳಿತು ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅಖಿಲ ಭಾರತ ನ್ಯಾಯಾಂಗ ಸೇವೆಗಳ ಸಂಸ್ಥೆ ಸೃಷ್ಟಿಗೆ ರಾಜ್ಯ ಸರ್ಕಾರ ಮತ್ತೆ ವಿರೋಧ ವ್ಯಕ್ತಪಡಿಸಿದೆ. ಜತೆಗೆ, ನ್ಯಾಯಾಂಗದಲ್ಲಿ ಸೌಲಭ್ಯಗಳ ಸುಧಾರಣೆಗೆ ಹೆಚ್ಚು ನೆರವಿಗಾಗಿ ಮನವಿ ಮಾಡಿದೆ. ನ್ಯಾಯಾಂಗ ಸೇವೆಗಳ ಸಂಸ್ಥೆ ಸ್ಥಾಪನೆ ಸಂಬಂಧ ರಾಜ್ಯದ ನಿಲುವನ್ನು ಕೇಂದ್ರ
ಕಾನೂನು ಸಚಿವಾಲಯಕ್ಕೆ ತಿಳಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com