ಪುಟ್ಟಿಯ ಕರೆಗೆ ಓ ಎಂದ ಒಬಾಮ: ಪತ್ರ ನೋಡಿ ಸೋ'ಫಿದಾ!'

ದೇಶದ ಚುಕ್ಕಾಣಿ ಹಿಡಿದವನಿಗೆ ತಲೆ ತುಂಬಾ ಕೆಲಸವಿರುತ್ತದೆ. ಅದರಲ್ಲೂ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರ ಬಗ್ಗೆ ಕೇಳಬೇಕೆ? ಮೈತುಂಬ ಕೆಲಸವಿದ್ದರೂ ಬರಾಕ್ ಒಬಾಮ ಒಂದು ಪುಟ್ಟಿಯ ಕರೆಗೆ ಓಗೊಟ್ಟಿದ್ದಾರೆ. ಯಾಕೆ ಗೊತ್ತೇ? ಮುಂದೆ ಓದಿ...
ಸೋಫಿಯಾ
ಸೋಫಿಯಾ

ಮುಂಬೈ: ದೇಶದ ಚುಕ್ಕಾಣಿ ಹಿಡಿದವನಿಗೆ ತಲೆ ತುಂಬಾ ಕೆಲಸವಿರುತ್ತದೆ. ಅದರಲ್ಲೂ ವಿಶ್ವದ ದೊಡ್ಡಣ್ಣ ಅಮೆರಿಕದ ಅಧ್ಯಕ್ಷರ ಬಗ್ಗೆ ಕೇಳಬೇಕೆ? ಮೈತುಂಬ ಕೆಲಸವಿದ್ದರೂ ಬರಾಕ್ ಒಬಾಮ ಒಂದು ಪುಟ್ಟಿಯ ಕರೆಗೆ ಓಗೊಟ್ಟಿದ್ದಾರೆ. ಯಾಕೆ ಗೊತ್ತೇ? ಮುಂದೆ ಓದಿ.
ಆಕೆ ಹೆಸರು ಸೋಫಿಯಾ. ವಯಸ್ಸು 9 ವರ್ಷ. ಅವಳದ್ದೇ ವಯಸ್ಸಿನ ಬೇರೆ ಹುಡುಗಿಯರಿಗೆ ಡಾಲರ್ ಕೊಟ್ರೆ ಖುಷಿಯಿಂದ ಖರ್ಚುಮಾಡಿಬಿಡುತ್ತಿದ್ದರು
ಆದರೆ, ಸೋಫಿಯಾ ಮಾತ್ರ ದಿನವೂ ಖರ್ಚು ಮಾಡುವ `ಡಾಲರ್' ನೋಟುಗಳನ್ನು ನೋಡುತ್ತಿದ್ದಾಗ ಆಕೆಗೊಂದು ಹೊಸ ಐಡಿಯಾ  ಬಂದಿತ್ತು. ನೋಟುಗಳ ಮೇಲೆ ಯಾವತ್ತೂ ಸಾಧನೆ ಮಾಡಿದ ಪುರುಷರ ಚಿತ್ರನ್ನೇ ಮುದ್ರಿಸಿದ್ದಾರೆ. ಅಂಥ ಗೌರವ ಮಹಿಳೆಯರಿಗೆ ಏಕೆ ಇಲ್ಲ ಎಂದು ಯೋ ಚನೆ ಮಾಡಿದಳು. ಅದಕ್ಕೆ ಉತ್ತರವನ್ನು ಅಮೆರಿಕ ಅಧ್ಯಕ್ಷರಿಂದಲೇ ಪಡೆಯಲು ನಿರ್ಧರಿಸಿ ಪತ್ರ ಬರೆದೇ ಬಿಟ್ಟಳು.
ಉತ್ತರಿಸಲು ಮರೆಯಲಿಲ್ಲ ಬರಾಕ್ : ಪುಟ್ಟಿ 3ನೇ ತರಗತಿ ಓದುತ್ತಿರುವಾಗ ಈ ಪತ್ರಬರೆದಿದ್ದಳು. ಇದಕ್ಕೆ ಸುಮಾರು ತಿಂಗಳು ಕಾದರೂ ಉತ್ತರ ಬರಲಿಲ್ಲ. ಹುಡುಗಿಯೂ ಮರೆತಿದ್ದಳು. ಆದರೆ ಒಬಾಮ ಮರೆತಿರಲಿಲ್ಲ. ಒಂದು ವರ್ಷದ ಬಳಿಕ ಸ್ವತಃ ಒಬಾಮಾರೇ ಪತ್ರ ಓದಿ `ಚಿಕ್ಕವರೆಲ್ಲ ಕೋಣರಲ್ಲ' ಎಂದು ಆಕೆಯ ಹೊಸ ಐಡಿಯಾವನ್ನ ಮೆಚ್ಚಿದ್ದಾರೆ. ಇದಕ್ಕೆ ಹುಡುಗಿಯ ಪತ್ರಕ್ಕೆ ವೈಟ್ ಹೌಸ್‍ನಿಂದ ಪತ್ರ ಬರೆದೇ ಬಿಟ್ಟರು. ನಮಗೆ ಐಡಿಯಾ ಕೊಟ್ಟಿದ್ದಕ್ಕಾಗಿ ಧನ್ಯವಾದ. ನಿನ್ನ ಪಟ್ಟಿಯಲ್ಲಿನ ಮಹಿಳೆಯರ ಹೆಸರು ಅದ್ಭುತವಾಗಿದೆ. ಸದ್ಯಕ್ಕೆ ಅಧ್ಯಯನ ಕಡೆಗೆ ಗಮನ ಕೊಡು ಎಂದು ಬರೆದಿದ್ದಾರೆ. ಅಷ್ಟು ಮಾತ್ರವಲ್ಲ ಡಾಲರ್ ನೋಟುಗಳಲ್ಲಿ ಮಹಿಳಾ ಸಾಧಕಿಯರ ಫೋಟೋ ಮುದ್ರಿಸುವ ಬಗ್ಗೆ  ಯೋಚನೆ ಮಾಡುತ್ತೇನೆ ಎಂದು ಬರೆದಿದ್ದಾರೆ.



ಪ್ರೀತಿಯ ಅಧ್ಯಕ್ಷರೇ,
ನನಗೆ ಒಂದು ಸಂದೇಹವಿದೆ. ಏಕೆ ಡಾಲರ್ ನೋಟು ಮತ್ತು ಕಾಯಿನ್ ಗಳಲ್ಲಿ ಒಬ್ಬ ಮಹಿಳಾ ಸಾಧಕಿಯರ ಚಿತ್ರ ಮುದ್ರಿಸಲಿಲ್ಲ?ನನಗನಿಸುತ್ತದೆ ಡಾಲರ್‍ಗಳಲ್ಲಿ ಮಹಿಳೆಯರ ಹೆಸರಿರಬೇಕು. ಏಕೆಂದರೆ, ಮಹಿಳೆ ಯರಿಲ್ಲದೇ ಪುರುಷರೂ ಇರುತ್ತಿರ ಲಿಲ್ಲ.ನಮ್ಮೂಲ್ಲೂ ಮಹಿಳಾ ಸಾಧಕ ರಿದ್ದಾರೆ. ಅಂಥ ಕೆಲ ಸಾಧಕಿಯರನ್ನು ನಾನು ಪಟ್ಟಿ ಮಾಡಿದ್ದೇನೆ. ಸಾಧ್ಯವಾದಾಗ ಉತ್ತರ ಬರೀರಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com