ಸ್ಮೃತಿ ಇರಾನಿ ಟ್ರಯಲ್ ರೂಂ ಪ್ರಕರಣ: ಫ್ಯಾಬ್ ಇಂಡಿಯಾದ 9 ಮಂದಿಗೆ ಸಮನ್ಸ್

ಫ್ಯಾಬ್ ಇಂಡಿಯಾದ ಮಹಿಳೆಯರ ಟ್ರಯಲ್ ರೂಮ್ ನಲ್ಲಿ ರಹಸ್ಯ ಕ್ಯಾಮರಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಸೇರಿ ಒಂಬತ್ತು ಮಂದಿ ವಿರುದ್ಧ ಸಮನ್ಸ್ ಜಾರಿಯಾಗಿದೆ.
ಫ್ಯಾಬ್ ಇಂಡಿಯಾ
ಫ್ಯಾಬ್ ಇಂಡಿಯಾ
Updated on

ಪಣಜಿ: ಫ್ಯಾಬ್ ಇಂಡಿಯಾದ ಮಹಿಳೆಯರ ಟ್ರಯಲ್ ರೂಮ್ ನಲ್ಲಿ ರಹಸ್ಯ ಕ್ಯಾಮರಾ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯ ಸಿಇಒ ಸೇರಿ ಒಂಬತ್ತು ಮಂದಿ ವಿರುದ್ಧ ಸಮನ್ಸ್ ಜಾರಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ಯಾಬ್ ಇಂಡಿಯಾ ಸಂಸ್ಥೆಯ ಸಿಇಒ, ಎಂಡಿ ಸೇರಿ 9 ಆರೋಪಿಗಳ ವಿರುದ್ಧ ಗೋವಾ ಪೊಲೀಸರು ಸಮನ್ಸ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಗೋವಾ ಪ್ರವಾಸದ ವೇಳೆ ಸ್ಮೃತಿ ಇರಾನಿ ಅವರು ಕಾಂದೋಳಿಂನಲ್ಲಿನ ಫ್ಯಾಬ್ ಇಂಡಿಯಾ ಮಳಿಗೆಯಲ್ಲಿ ಕಳೆದ ಶುಕ್ರವಾರ ಬಟ್ಟೆ ಖರೀದಿಸಿ ಡ್ರೆಸಿಂಗ್ ರೂಂಗೆ ತೆರಳಿದ್ದರು. ಈ ವೇಳೆ ಅಲ್ಲಿ ರಹಸ್ಯ ಕ್ಯಾಮೆರಾ ಅಳವಡಿಸಿದನ್ನು ಪತ್ತೆ ಮಾಡಿದ್ದರು.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com