ವಿಮಾನದಲ್ಲಿ ಬೆಂಕಿ ಪಟ್ಣ ಕೊಂಡೊಯ್ದರೇ ತಪ್ಪೇನು? ಸಚಿವ ಗಜಪತಿರಾಜು

ತಾನೊಬ್ಬ ಚೈನ್ ಸ್ಮೋಕರ್ ಎಂದು ಹೇಳಿಕೊಂಡಿರುವ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರು, ವಿಮಾನದಲ್ಲಿ ಪ್ರಯಾಣಿಸುವಾಗ...
ಅಶೋಕ್ ಗಜಪತಿರಾಜು
ಅಶೋಕ್ ಗಜಪತಿರಾಜು

ನವದೆಹಲಿ: ತಾನೊಬ್ಬ ಚೈನ್ ಸ್ಮೋಕರ್ ಎಂದು ಹೇಳಿಕೊಂಡಿರುವ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರು, ವಿಮಾನದಲ್ಲಿ ಪ್ರಯಾಣಿಸುವಾಗ ಬೆಂಕಿ ಪಟ್ಣ ಕೊಂಡೊಯ್ಯುವುದು ಮಹಾ ಅಪರಾಧವೇ ಎಂದು ಪ್ರಶ್ನಿಸಿದ್ದಾರೆ.

ದೆಹಲಿಯ ವಿಮಾನ ನಿಲ್ದಾಣದಲ್ಲಿ ಗಜಪತಿರಾಜು ಅವರ ಕಿಸೆಯಲ್ಲಿ ಬೆಂಕಿಪಟ್ಣ ಇರುವುದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಅದನ್ನು ಪ್ರಶ್ನಿಸಿದ್ದರು. ಇದಕ್ಕೆ ಉಡಾಫೆ ಉತ್ತರ ಕೊಟ್ಟಿರುವ ಕೇಂದ್ರ ಸಚಿವರು, ನಾನೊಬ್ಬ ಚೈನ್ ಸ್ಮೋಕರ್. ಹೀಗಾಗಿ ನನ್ನೊಂದಿಗೆ ಬೆಂಕಿಪಟ್ಣವೂ ಬಂದಿದೆ. ಇದು ಮಹಾ ಪ್ರಮಾದವೇ ಎಂದಿದ್ದಾರೆ.

ಕೇವಲ ಬೆಂಕಿ ಪಟ್ಣದಿಂದ ವಿಮಾನ ಹೈಜಾಕ್ ಮಾಡಲು ಆಗಲ್ಲ. ಮ್ಯಾಚ್ ಬಾಕ್ಸ್‌ನಿಂದ ಇಂಥ ಘಟನೆ ವಿಶ್ವದ ಯಾವ ಭಾಗದಲ್ಲೂ ನಡೆದಿಲ್ಲ ಎಂದು ತಮ್ಮ ಕ್ರಮವನ್ನು ಸಮರ್ಥಸಿಕೊಂಡಿದ್ದಾರೆ.

ವಿಮಾನದೊಳಕ್ಕೆ ಬೆಂಕಿಪಟ್ಟಣ ತೆಗೆದುಕೊಂಡು ಹೋಗಬಾರದು ಎಂಬ ನಿಯಮವಿದೆ. ಆದರೆ ವಿಮಾನಯಾನ ಸಚಿವರಾಗಿ ನೀವೇ ಈ ಹೇಳಿದರೆ ಹೇಗೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಗಜಪತಿರಾಜು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com