ಏ.23ರಿಂದ ಮೇ 13ರವರೆಗೆ ರಾಜ್ಯಸಭಾ ಕಲಾಪ

ಸಂಸತ್
ಸಂಸತ್

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿವಾದಿತ ಭೂ ಸ್ವಾಧೀನ ಮಸೂದೆ ಅಂಗೀಕಾರಕ್ಕಾಗಿ ಭಾರಿ ಸರ್ಕಸ್ ನಡೆಸುತ್ತಿದ್ದು, ಮಸೂದೆ ಅಂಗೀಕಾರಕ್ಕಾಗಿಯೇ ಏಪ್ರಿಲ್ 23ರಿಂದ ಮೇ 13ರ ವರೆಗೆ ವಿಶೇಷ ರಾಜ್ಯಸಭಾ ಅಧಿವೇಶನ ಕರೆದಿದೆ.

ಈಗಾಗಲೇ ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಭೂ ಸ್ವಾಧೀನ ಮಸೂದೆ ಈಗ ರಾಜ್ಯಸಭೆಯಿಂದ ಅಂಗೀಕಾರ ಪಡೆಯುವುದಕ್ಕಾಗಿ ಏಪ್ರಿಲ್ 23ರಿಂದ ಮೇ 13ರವರೆಗೆ ರಾಜ್ಯಸಭಾ ಕಲಾಪಕ್ಕಾಗಿ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಮಂಗಳವಾರ ಸಿಫಾರಸು ಮಾಡಿದೆ.

ಬಜೆಟ್ ಅಧಿವೇಶನದ ವೇಳೆ ರಾಜ್ಯಸಭೆಯಲ್ಲಿ ಭೂ ಸ್ವಾಧೀನ ವಿಧೇಯಕಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಸರ್ಕಾರ ಈ ಸಂಬಂಧ ಹೊರಡಸಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆದಿದ್ದು, ಕೆಲವು ತಿದ್ದುಪಡಿಯ ನಂತರ ಮತ್ತೊಮ್ಮೆ ಸುಗ್ರೀವಾಜ್ಞೆ ಹೊರಡಿಸುವ ನಿರ್ಧಾರ ತೆಗೆದುಕೊಂಡಿದೆ.

ಭೂ ಸ್ವಾಧೀನ ಮಸೂದೆಗೆ 11 ತಿದ್ದುಪಡಿಗಳನ್ನು ಸೇರಿಸಲಾಗಿದ್ದು, ಒಟ್ಟಿನಲ್ಲಿ ಹೇಗಾದರೂ ಮಾಡಿ ಭೂ ಸ್ವಾಧೀನ ವಿಧೇಯಕಕ್ಕೆ ರಾಜ್ಯಸಭೆಯ ಅಂಗೀಕಾರ ಪಡೆಯುವುದು ಸರ್ಕಾರದ ಉದ್ದೇಶವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com