
ನವದೆಹಲಿ: ವಿದೇಶಾಂಗ ವ್ಯವಹಾರಗಳ ಸಚಿವ ವಿ.ಕೆ. ಸಿಂಗ್ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಯೆಮೆನ್‍ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯವನ್ನು ಹಗುರವಾಗಿ ಕಾಣುವಂಥ ಹೇಳಿಕೆ ನೀಡಿದ್ದಾರೆ ಎನ್ನುವ ಆರೋಪ ಈಗ ಅವರ ವಿರುದ್ಧ ಕೇಳಿ ಬಂದಿದೆ. ಯೆಮೆನ್‍ನ `ಆಪರೇಷನ್ ರಾಹತ್' ಒಂದು ಕ್ಲಿಷ್ಟಕರ ಕಾರ್ಯಾಚರಣೆ. ಆದರೆ, ಪಾಕಿಸ್ತಾನದ ರಾಯಭಾರ ಕಚೇರಿಗೆ ಭೇಟಿ ಕೊಟ್ಟಾಗ ಆಗುವಷ್ಟು ಉದ್ವೇಗ ಈ ಕಾರ್ಯಾಚರಣೆ ವೇಳೆ ಆಗುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಈ ಹೇಳಿಕೆ ಕುರಿತು ಪ್ರತಿಪಕ್ಷಗಳಿಂದ ತೀವ್ರ ಆಕ್ರೋಶ ವ್ಯಕ್ತವಾ ಗಿದೆ. ಈ ಹಿಂದೆ ಪಾಕ್ ರಾಜ ತಾಂತ್ರಿಕ ಕಚೇರಿಯಲ್ಲಿ ಆಯೋಜಿಸಿದ್ದಪಾಕ್ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡು ಸಿಂಗ್ ವಿವಾದ ಸೃಷ್ಟಿಸಿದ್ದರು. ಇದೇ ವೇಳೆ, ವಿವಾದಿತ ಹೇಳಿಕೆಯನ್ನು ಪ್ರಸಾರ ಮಾಡಿದ ಮಾಧ್ಯಮಗಳ ವಿರುದ್ಧ ಹರಿಹಾಯ್ದಿರುವ ವಿ.ಕೆ.ಸಿಂಗ್, ಮಾಧ್ಯಮ ಗಳೆಲ್ಲ `ಪ್ರೆಸ್‍ಟಿಟ್ಯೂಟ್'ಗಳು ಎಂದು ಕರೆ ಯುವ ಮೂಲಕ ಮತ್ತೊಂದು ಅನಪೇಕ್ಷಿತ ಹೇಳಿಕೆ ನೀಡಿದ್ದಾರೆ. ಸಿಂಗ್ ಅವರ ಭಾಷೆ ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತಿದೆ.
ಇಂತಹ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಪ್ರತಿಪಕ್ಷಗಳು ಹೇಳಿವೆ.
Advertisement