ಹದಿನಾಲ್ಕು ವರ್ಷದೊಳಗಿನ ಮಕ್ಕಳೂ ದುಡಿಯಬಹುದು!

14 ವರ್ಷದೊಳಗಿನ ಮಕ್ಕಳಿಗೆ ಆಯ್ದ ಕೌಟುಂಬಿಕ ಉದ್ಯಮಗಳಲ್ಲಿ ದುಡಿಯಲುಅವಕಾಶ ನೀಡಲುಸರ್ಕಾರಚಿಂತನೆ ನಡೆಸಿದೆ. ಈಸಂಬಂಧ ಬಡಕುಟುಂಬಗಳಿಗೆ...
ಬಾಲಕಾರ್ಮಿಕ
ಬಾಲಕಾರ್ಮಿಕ

ನವದೆಹಲಿ: 14 ವರ್ಷದೊಳಗಿನ ಮಕ್ಕಳಿಗೆ ಆಯ್ದ ಕೌಟುಂಬಿಕ ಉದ್ಯಮಗಳಲ್ಲಿ ದುಡಿಯಲುಅವಕಾಶ ನೀಡಲುಸರ್ಕಾರಚಿಂತನೆ ನಡೆಸಿದೆ. ಈಸಂಬಂಧಬಡಕುಟುಂಬಗಳಿಗೆ
ಅನುಕೂಲವಾಗುವ ರೀತಿಯಲ್ಲಿ ಬಾಲಕಾರ್ಮಿಕ ಕಾಯ್ದೆ ಗೆ ತಿದ್ದುಪಡಿ ತರಲು ಕಾರ್ಮಿಕ ಸಚಿವಾಲಯ ಮುಂದಾಗಿದೆ. 14 ವರ್ಷದೊಳಗಿನ ಮಕ್ಕಳು ಶಾಲಾ ಅವಧಿ ನಂತರ
ಹಾಗೂ ರಜೆಯಲ್ಲಿ ಕೌಟುಂಬಿಕ ಉದ್ಯಮ ಅಥವಾ ಜಮೀನಲ್ಲಿ ಕೆಲಸ ಮಾಡುವುದು ತಪ್ಪೇನಲ್ಲ. ಇದರಿಂದ ಶಿಕ್ಷಣಕ್ಕೆ ತೊಂದರೆಯಾಗ ಬಾರದಷ್ಟೆ ಎನ್ನುವ ಅಭಿಪ್ರಾ
ಯವನ್ನು ಕಾರ್ಮಿಕ ಸಚಿವಾಲಯ ವ್ಯಕ್ತಪಡಿಸಿದೆ. ಈ ಹೊಸ ನಿಯಮಾವಳಿ ಸರ್ಕಸ್ ಹೊರತುಪಡಿಸಿ ಮನರಂಜನೆ ಉದ್ಯಮ ಹಾಗೂ ಕ್ರೀಡೆಗೂ ಅನ್ವಯವಾಗಲಿದೆ.
ಆದರೆ, 14ರಿಂದ 18 ವರ್ಷದ ನಡುವಿನ ಮಕ್ಕಳನ್ನು ಯಾವುದೇ ಕಾರಣಕ್ಕೂ ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯದಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ.
ಭಾರತದಲ್ಲಿ ಹಿರಿಯರ ಕೆಲಸದಲ್ಲಿ ಕೈಜೋಡಿಸಿಕೊಂಡೇ ಮಕ್ಕಳು ಕಲಿಯುತ್ತಾರೆ. ನಾವು ಈ ವ್ಯವಸ್ಥೆಯನ್ನು ಬದ ಲಾಯಿಸ ಬಯಸಲ್ಲ. ಅದರ ಬದಲು ಮನೆಯಲ್ಲಿ ಕೆಲಸ
ಮಾಡುತ್ತಲೇ ಕಲಿಕೆಗೆ ಪ್ರೋತ್ಸಾಹ ನೀಡುತ್ತೇವೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಈ ಹೊಸ ನಿಯಮಾವಳಿಯಿಂದ ಬಡ ಕುಟುಂಬಗಳಿಗೆ ಅನುಕೂಲ
ವಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ವಿರೋಧ: ಸರ್ಕಾರದ ಈ ನಡೆಗೆ ಮಕ್ಕಳ ಹಕ್ಕುಗಳ ಹೋರಾಟಗಾರರು ವಿರೋಧಿಸಿದ್ದಾರೆ. ಇದರಿಂದಮಕ್ಕಳುಶಿಕ್ಷಣವಂಚಿತರಾಗಬಹುದು, ಕಾನೂನು ದುರುಪಯೋ ಗವಾಗಬಹುದು ಎಂದು ದೂರಿದ್ದಾರೆ. ಅಲ್ಲದೆ, 14ವರ್ಷದೊಳಗಿನಮಕ್ಕಳಿಗೆಕಡ್ಡಾಯಶಿಕ್ಷಣ ನೀಡಬೇಕೆನ್ನುವ ಸರ್ಕಾರದ ನೀತಿ ಅನುಷ್ಠಾನಕ್ಕೂ ಇದರಿಂದ ಅಡ್ಡಿಯÁಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com