ಗ್ರೀನ್‍ಪೀಸ್ ಬ್ಯಾಂಕ್ ಖಾತೆ ಮುಟ್ಟುಗೋಲು

ದೇಶ ವಿರೋಧಿ ಆರೋಪ ಎದುರಿಸುತ್ತಿರುವ ಗ್ರೀನ್ ಪೀಸ್ ಇಂಡಿಯಾ ಮೇಲೆ ಸರ್ಕಾರ ಮತ್ತೆ ಹರಿ ಹಾಯ್ದಿದೆ. ಅಭಿವೃದ್ಧಿ ಮಾರಕವಾಗಿ ಕಾರ್ಯ ನಿರ್ವಹಿಸುತ್ತಿರುವ...
ಗ್ರೀನ್ ಪೀಸ್ ಇಂಡಿಯಾ
ಗ್ರೀನ್ ಪೀಸ್ ಇಂಡಿಯಾ

ನವದೆಹೆಲಿ : ದೇಶ ವಿರೋಧಿ  ಆರೋಪ ಎದುರಿಸುತ್ತಿರುವ ಗ್ರೀನ್ ಪೀಸ್ ಇಂಡಿಯಾ ಮೇಲೆ ಸರ್ಕಾರ ಮತ್ತೆ ಹರಿ ಹಾಯ್ದಿದೆ. ಅಭಿವೃದ್ಧಿ ಮಾರಕವಾಗಿ ಕಾರ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಯ ನೋಂದಣಿಯನ್ನು ಕೇಂದ್ರ ಗೃಹ ಸಚಿವಾಲಯ ರದ್ದು ಪಡಿಸಿದೆ.
ಈ ಪರಿಸರ ಸಂಸ್ಥೆಯು ವಿದೇಶಿ ಬಂಡವಾಳ ಪಡೆಯದಂತೆ ಸರ್ಕಾರ ನಿರ್ಬಂಧ ಹೇರಿದ್ದು, ಅವರ 7 ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಅಲ್ಲದೇ, ಗ್ರೀನ್‍ಪೀಸ್ ಇಂಡಿಯಾಗೆ ಸರ್ಕಾರ ನೊಟೀಸ್ ಕೂಡ ಕಳುಹಿಸಿದೆ. ವಿದೇಶದಿಂದ ಹಣ ಪಡೆಯುವುದನ್ನು ಕಾಯಂ ಆಗಿಯಾಕೆ ನಿಲ್ಲಿಸಿಲ್ಲ ಎಂಬುದಕ್ಕೆ ಉತ್ತರಿಸಿ ಎಂದು ಸರ್ಕಾರ ಆದೇಶಿಸಿದೆ. ಸರ್ಕಾರದ ಮಹತ್ವದ ಯೋಜನೆಗಳ ವಿರುದ್ಧ ಪ್ರತಿಭಟನೆ ಮಾಡುವ ಮೂಲಕ ಗ್ರೀನ್‍ಪೀಸ್ ಸಂಸ್ಥೆಯು ಭಾರತದ ಆರ್ಥಿಕತೆಗೆ ಮಾರಕವಾಗಿದೆ ಎಂದು ಗುಪ್ತಚರ ಇಲಾಖೆಯು ಕಳೆದ ವರ್ಷವೇ ತಿಳಿಸಿತ್ತು. ವಿದ್ಯುತ್ ಯೋಜನೆಗಳು, ಗಣಿಗಾರಿಕೆ ಹಾಗೂ ಜೈವಿಕ ಅಭಿವೃದ್ಧಿ  ಆಹಾರ ಮುಂತಾದ ಪ್ರಮುಖ ಪ್ರಾಜೆಕ್ಟ್
ಗಳ ವಿರುದ್ಧ ಪ್ರತಿಭಟನೆ ನಡೆಸಿತ್ತು. ಈ ಪ್ರತಿಭಟನೆಗಳನ್ನು ನಡೆಸುವಂತೆ ವಿದೇಶ ಕುಮ್ಮಕ್ಕು ನೀಡಿತ್ತು ಎಂಬ ಆರೋಪಗಳು ಇದೆ. ವಿದೇಶದಿಂದ ಬಂದ ಶೇ.20ರಷ್ಟು
ಹಣ ಅನುಮಾನಾಸ್ಪದ ಉದ್ದೇಶಗಳಿಗಾಗಿ ಬಳಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.
ಕಳೆದ ತಿಂಗಳು 23ಕ್ಕೆ ರು. 1 ಕೋಟಿ ಈ ಸಂಸ್ಥೆಯ ಅಕೌಂಟ್‍ಗೆ ವರ್ಗಾವಣೆಯಾಗಿತ್ತು. ಬುಧವಾರ ಸರ್ಕಾರವು ಅಕೌಂಟ್ ಗಳನ್ನು ಬ್ಲಾಕ್  ಮಾಡುವ ಮೂಲಕ ಸಂಸ್ಥೆಯ ಕಾನೂನುಬದ್ಧ ಅಧಿಕಾರಗಳಿಗೆ ಧಕ್ಕೆಯುಂಟಾಗಿದೆ ಎಂದು ಆರೋಪಿಸಿದೆ. ಇದೇ ವರ್ಷದ ಜನವರಿಯಲ್ಲಿ ಗ್ರೀನ್ ಪೀಸ್‍ನ ಹಿರಿಯ ಪ್ರಚಾರಕಿ ಪ್ರಿಯಾ ಪಿಳ್ಳೈಗೆ ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಲಂಡನ್‍ಗೆ ತೆರಳದಂತೆ ಅಡ್ಡಿ ಮಾಡಿದ್ದರು. ಪಿಳ್ಳೈ ಅವರಿಗೆ ವೀಸಾ ಅವಧಿ ಇದ್ದರೂ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಗ್ರೀನ್‍ಪೀಸ್‍ನ ಯಾವೊಬ್ಬ ಸದಸ್ಯನೂ ವಿದೇಶಕ್ಕೆ ತೆರಳುವಂತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಈ ಸಂಬಂಧ ಸರ್ಕಾರದ ವಿರುದ್ಧ ಪಿಳ್ಳೈ ದೂರು ದಾಖಲಿಸಿದ್ದರು. ನಿಷೇಧಿತ ವ್ಯಕ್ತಿಗಳ ಗುಂಪಿನಿಂದ ಪಿಳ್ಳೈ ಹೆಸರನ್ನು ತೆಗೆಯುವಂತೆ ದೆಹಲಿ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com