
ಪ್ಯಾರಿಸ್: ಅಂತೂ ಹಾರಿ ಬರಲಿವೆ 36 ರಫೇ ಲ್ ಯುದ್ಧ ವಿಮಾನಗಳು. ಹೀಗಾಗಿ, ಭಾರತೀಯ ವಾಯುಪಡೆಗೆ ಅತ್ಯಂತ ತುರ್ತಾಗಿ ಬೇಕಾಗಿರುವಅತ್ಯಾಧುನಿಕ ವಿಮಾನಗಳ ಕೊರತೆ ಶೀಘ್ರದಲ್ಲೇ ನೀಗಲಿದೆ. 2012ರಿಂದ ಚರ್ಚೆಯ ಹಂತದಲ್ಲಿದ್ದ ವಿಮಾನಗಳ ಖರೀದಿ ಪ್ರಕ್ರಿಯೆಗೆ ಕೊನೆಗೂ ಪ್ರಧಾನಿ ನರೇಂದ್ರ ಮೋದಿ ಮುಕ್ತಾಯ ಹಾಕಿದ್ದಾರೆ. ಹಾರುವ ಹಂತದಲ್ಲಿರುವ ರು. 74.70 ಕೋಟಿ ಮೌ ಲ್ಯದ 36 ವಿಮಾನಗಳನ್ನು ತಕ್ಷಣವೇ ಖರೀದಿಸಲಾಗುತ್ತದೆ. ಉಳಿದ 108 ವಿಮಾನಗಳನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್‍ನಲ್ಲಿ ಜೋಡಣೆ ಮಾಡಲಾಗುತ್ತದೆ. ಫ್ರಾನ್ಸ್ ಅಧ್ಯಕ್ಷ ಫ್ರಾನ್ಸಿಸ್ ಹಾಲೆಂಡ್ ಜತೆಗೆ ಶುಕ್ರವಾರ ಪ್ಯಾರಿಸ್‍ನಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಪ್ರಧಾನಿ ಮೋದಿ ಈ ಮಾಹಿತಿ ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿ ಮೋದಿ ಪ್ರತಿಪಾದಿಸುವ ಮೇಕ್ ಇನ್ ಇಂಡಿಯಾ ಯೋ ಜನೆಯಡಿ ಒಟ್ಟು 17 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಪೈಕಿ ನಾಗರಿಕ ಪರಮಾಣು ಒಪ್ಪಂದ, ಭಾರತೀಯ ರೈಲ್ವೆ ಮೇಲ್ದರ್ಜೆಗೆ ಏರಿಸುವಿಕೆ ಸೇರಿದೆ. ಇದಲ್ಲದೆ ತಾಂತ್ರಿಕ ಕ್ಷೇತ್ರದಲ್ಲಿ ರು. 13, 200
ಕೋಟಿ ಬಂಡವಾಳ ಹೂಡಲು ಅಲ್ಲಿನ ಸರ್ಕಾರ ಉತ್ಸಾಹ ತೋರಿದೆ. ಫ್ರಾನ್ಸ್ ಬೆಂಬಲ
ಇದರ ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಯಲ್ಲಿ ಭಾರತದ ಶಾಶ್ವತ ಸದಸ್ಯತ್ವದ ಉಮೇದುವಾರಿಕೆಗೆ ಫ್ರಾನ್ಸ್ ಬೆಂಬಲ ನೀಡಿದೆ.
ಎರಡೂ ರಾಷ್ಟ್ರಗಳು ವಿದ್ಯಾಭ್ಯಾಸ, ಆರ್ಥಿಕ, ರಕ್ಷಣೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಒಪ್ಪಂದ ಮಾ ಡಿಕೊಂಡಿವೆ.
ಪ್ರಧಾನಿ ಹೇಳಿದ್ದು
Advertisement