

ನವದೆಹಲಿ: ದೇಶದಾದ್ಯಂತ ವಾಯುಮಾಲಿನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಎಚ್ಚೆತ್ತುಕೊಂಡಿದ್ದು, ಧೂಳು ಮುಕ್ತ ರಸ್ತೆಗಳನ್ನಾಗಿಸುವ ಸಲುವಾಗಿ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಮಾಲಿನ್ಯ ಸಮಸ್ಯೆಗಳಲ್ಲಿ ರಸ್ತೆಗಳಲ್ಲಿನ ಧೂಳು ಸಹ ಪ್ರಮುಖ ಸಮಸ್ಯೆಯಾಗಿದ್ದು, ಇದರಿಂದ ಮಾಲಿನ್ಯ ಸಂಖ್ಯೆಯೂ ಹೆಚ್ಚುತ್ತಿದೆ. ಶೇ.38ರಷ್ಟು ಮಾಲಿನ್ಯ ಧೂಳಿನಿಂದಲೇ ಪರಿಣಮಿಸುತ್ತಿದೆ. ಹಾಗಾಗಿ ಧೂಳಿನ ಸಮಸ್ಯೆಯನ್ನು ದೆಹಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆ ಕುರಿತಂತೆ ಚಿಂತನೆ ನಡೆಸುತ್ತಿದೆ ಎಂದು ಹೇಳಲಾಗುತ್ತಿದೆ.
ಧೂಳು ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಮಸ್ಯೆಯನ್ನು ನಿವಾರಿಸಲು ಹಾಗೂ ಮಾಲಿನ್ಯ ತಡೆಗಟ್ಟುವ ಸಲುವಾಗಿ ಸರ್ಕಾರ ಯೋಜನೆಗಳನ್ನು ರೂಪಿಸುತ್ತಿದೆ. ಈ ಬಾರಿ ಯಾಂತ್ರಿಕವಾಗಿ ಸ್ವಚ್ಛಗೊಳಿಸಲು ಸರ್ಕಾರ ತೀರ್ಮಾನ ಕೈಗೊಳ್ಳಲಾಗಿದ್ದು, ಇನ್ನು 3 ತಿಂಗಳಲ್ಲಿ ಕೆಲಸವನ್ನು ಪ್ರಾರಂಭಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.
ವಾಯು ಮಾಲಿನ್ಯದಲ್ಲಿ ಶೇ.78ರಷ್ಟು ವಾಹನಗಳಿಂದ ಮಾಲಿನ್ಯ ಉಂಟಾಗುತ್ತಿದ್ದರೆ, ಶೇ.38 ರಷ್ಟು ಧೂಳಿನಿಂದ ಆಗುತ್ತಿದೆ. ಧೂಳಿ ರಸ್ತೆಗಳಲ್ಲಿರುವ ಧೂಳಗಳನ್ನು ಕಡಿಮೆ ಮಾಡುವುದರಿಂದ ಶೇ.27 ರಷ್ಟು ಮಾಲಿನ್ಯ ಸಮಸ್ಯೆ ಕಡಿಮೆಯಾಗುತ್ತದೆ. ರಸ್ತೆಗಳಲ್ಲಿ ಪ್ರತಿನಿತ್ಯ ವಾಹನಗಳು ಚಲಿಸುವುದರಿಂದ ಧೂಳಿಲ್ಲದಂತೆ ಶುದ್ಧೀಕರಿಸುವುದು ಸವಾಲಿನ ಕೆಲಸ ಈ ಸಮಸ್ಯೆಗೆ ಧೀರ್ಘಕಾಲಿಕ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ರಸ್ತೆಗಳ ಮಧ್ಯೆ ಹಾಗೂ ಸುತ್ತಮುತ್ತ ಗಿಡಗಳನ್ನು ನೆಡುವುದರಿಂದ ಸ್ವಲ್ಪಮಟ್ಟದಲ್ಲಿ ಮಾಲಿನ್ಯವನ್ನು ತಡೆಗಟ್ಟಬಹುದು ಹಾಗಾಗಿ ರಸ್ತೆಗಳಲ್ಲಿ ಗಿಡಗಳನ್ನು ನೆಡುವ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ ಹಾಗೂ ಈಗಾಗಲೇ ಹಾಳಾಗಿರುವ ಪಾದಚಾರಿ ಮಾರ್ಗಗಳನ್ನು ಸರಿಪಡಿಸುವ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ವಾಯುಮಾಲಿನ್ಯ ತಡೆಗಟ್ಟುವ ಸಲುವಾಗಿ ಡೀಸೆಲ್ ವಾಹನಗಳನ್ನು ನಿಷೇಧಿಸುವ ಕುರಿತಂತೆ ಚರ್ಚೆಗಳು ನಡೆಸಲಾಗುತ್ತಿದೆ ಎಂದು ಸತ್ಯೇಂದರ್ ಜೈನ್ ಹೇಳಿದ್ದಾರೆ.