ಮುಸ್ಲಿಮರ ಮತದಾನ ಹಕ್ಕು ಹಿಂಪಡೆಯಿರಿ: ಶಿವಸೇನೆ

ವೊಟ್ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಮರ ಮತ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಮುಸ್ಲಿಮರ ಮತದಾನ ಹಕ್ಕನ್ನು ರದ್ದುಗೊಳಿಸಿ ಎಂದು ಶಿವಸೇನೆ...
ಶಿವ ಸೇನಾ ನಾಯಕ ಎಂಪಿ ಸಂಜಯ್ ರಾಟ್
ಶಿವ ಸೇನಾ ನಾಯಕ ಎಂಪಿ ಸಂಜಯ್ ರಾಟ್

ಮುಂಬಯಿ: ವೊಟ್ ಬ್ಯಾಂಕ್ ರಾಜಕಾರಣಕ್ಕೆ ಮುಸ್ಲಿಮರ ಮತ ಹೆಚ್ಚಾಗಿ ಬಳಕೆಯಾಗುತ್ತಿದ್ದು, ಮುಸ್ಲಿಮರ ಮತದಾನ ಹಕ್ಕನ್ನು ರದ್ದುಗೊಳಿಸಿ ಎಂದು ಶಿವಸೇನೆ ವಿವಾದಾತ್ಮಕ ಹೇಳಿಕೆ ನೀಡಿದೆ.

ಮುಸ್ಲಿಮರಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುವ ನೆಪದಲ್ಲಿ ವೋಟ್ ಬ್ಯಾಂಕ್‌ ರಾಜಕಾರಣ ಮಾಡಲಾಗುತ್ತಿದೆ. ಮುಸ್ಲೀಮರ ಶೈಕ್ಷಣಿಕ ಹಾಗೂ ಆರೋಗ್ಯ ಸ್ಥಿತಿಗತಿಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್‌ ಇದನ್ನೇ ದಾಳವಾಗಿ ಬಳಸಿಕೊಂಡಿದೆ. ಈಗ ಜಾತ್ಯತೀತರೆಂದು ಹೇಳಿಕೊಳ್ಳುವ ಎಲ್ಲರೂ ಇದನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಿವಸೇನೆಯ ಶಿವ ಸೇನಾ ನಾಯಕ ಎಂಪಿ ಸಂಜಯ್ ರಾಟ್ ಹೇಳಿದ್ದಾರೆ

ಪಕ್ಷದ ಮುಖವಾಣಿ ಸಮ್ನಾದ ಸಂಪಾದಕೀಯದಲ್ಲಿ ಬರೆದಿರುವ ಸಂಜಯ್ ರಾಟ್, ವೋಟ್ ಬ್ಯಾಂಕ್‌ ರಾಜಕಾರಣಕ್ಕೆ ಹೆಚ್ಚಾಗಿ ಬಳಕೆಯಾಗುವ ಕಾರಣ ಮುಸ್ಲಿಮರ ಮತದಾನದ ಹಕ್ಕನ್ನು ರದ್ದು ಪಡಿಸಬೇಕು. ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಹಾಗೂ ಓವೈಸಿ ಸೋದರರು ಅಲ್ಪಸಂಖ್ಯಾತ ಸಮುದಾಯವನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಕೇವಲ ರಾಜಕಾರಣಕ್ಕೆ ಮುಸ್ಲಿಮರನ್ನು ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಅವರ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ವೋಟ್ ಬ್ಯಾಂಕ್ ರಾಜಕಾರಣದಿಂದ ಅವರಿಗೆ ಭವಿಷ್ಯವೇ ಇಲ್ಲದಂತಾಗುವುದು. ಅದಕ್ಕೆ ಮುಸ್ಲಿಮರ ಮತದಾನದ ಹಕ್ಕನ್ನು ರದ್ದುಗೊಳಿಸಬೇಕು ಎಂದು ಹಿಂದೆ ಬಾಳಾ ಸಾಹೇಬ್‌ ಹೇಳಿದ್ದರು. ಅವರು ಹೇಳಿದ್ದು ಸರಿಯೇ ಇದೆ ಎಂದು ಪಕ್ಷದ ಮುಖವಾಣಿ ಸಮ್ನಾದ ಸಂಪಾದಕೀಯದಲ್ಲಿ ಬರೆಯಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com