ನೆಲ ಅಗೆದು ಡೈನೋಸಾರ್ ಪಳೆಯುಳಿಕೆ ಪತ್ತೆ ಹಚ್ಚಿದ 5 ವರ್ಷದ ಪೋರ

ಐದು ವರ್ಷದ ಬಾಲಕ 1000 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಡೈನೋಸಾರ್ ಪಳೆಯುಳಿಕೆ ಪತ್ತೆ ಹಚ್ಚಿದ್ದಾನೆ...
ಪಳೆಯುಳಿಕೆ ಪತ್ತೆ ಹಚ್ಚಿದ ಐದು ವರ್ಷದ ಬಾಲಕ ಬ್ರೈಸ್ (ಸಂಗ್ರಹ ಚಿತ್ರ)
ಪಳೆಯುಳಿಕೆ ಪತ್ತೆ ಹಚ್ಚಿದ ಐದು ವರ್ಷದ ಬಾಲಕ ಬ್ರೈಸ್ (ಸಂಗ್ರಹ ಚಿತ್ರ)

ವಾಷಿಂಗ್ಟನ್: ಐದು ವರ್ಷದ ಬಾಲಕ 1000 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಡೈನೋಸಾರ್ ಪಳೆಯುಳಿಕೆ ಪತ್ತೆ ಹಚ್ಚಿದ್ದಾನೆ.

ಸುಮಾರು  1000 ಮಿಲಿಯನ್ ವರ್ಷಗಳ ಹಳೆಯ ಡೈನೋಸಾರ್ ಸಂತತಿ ಬಗ್ಗೆ ಅನೇಕ ಸಂಶೋಧನೆಗಳು ಈಗಲೂ ಮುಂದುವರೆದಿದೆ. ಆದರೆ, ಬ್ರೈಸ್ ಎಂಬ ಬಾಲಕ ಆಟವಾಡುತ್ತಿದ್ದಾಗ ಈ ಡೈನೋಸಾರ್ ಪಳೆಯುಳಿಕೆ ಪತ್ತೆ ಹಚ್ಚಿದ್ದಾನೆ. ಅಮೆರಿಕದ ಟೆಕ್ಸಾಸ್‌ನ ಶಾಪಿಂಗ್ ಮಾಲ್‌ವೊಂದರ ಹಿಂಭಾಗದಲ್ಲಿರುವ ದಲಾಸ್ ಮೃಗಾಲಯದಲ್ಲಿ ನೆಲೆ ಅಗೆಯುತ್ತಾ ಆಟವಾಡುತ್ತಿದ್ದಾಗ ಈ ಪಳೆಯುಳಿಕೆ ಪತ್ತೆಯಾಗಿದೆ.

ಡೈನಾಸಾರ್ಸ್ಯ ಬಗ್ಗೆ ಮತ್ತಷ್ಟು ಸಂಶೋಧನೆ ಆರಂಭಿಸಿರುವ ಸದರನ್ ಮೆಥೋಡಿಸ್ಟ್ ವಿಶ್ವವಿದ್ಯಾನಿಲಯ ಈ ಬಾಲಕ ಪತ್ತೆ ಹಚ್ಚಿದ ಪಳಿಯುಳಿಕೆಗಳ ಬಗ್ಗೆಯೂ ಪರಿಶೀಲನೆ ಮುಂದುವರೆಸಿದ್ದಾರೆ. ವಿಶ್ವವಿದ್ಯಾಲಯದ ಸಂಶೋಧಕ ಮೈಕೆಲ್ ಪೋಲ್‌ಸಿನ್ ಅವರು ಈ ಬಗ್ಗೆ ಹೆಚ್ಚಿನ ಸಂಶೋಧನೆ ಕೈಗೊಂಡಿದ್ದಾರೆ. ಡೈನೋಸಾರ್‌ನ ಮೂಳೆಗಳನ್ನು ಈ ಸ್ಥಳದಿಂದ ಸಂಗ್ರಹಿಸಿದ್ದು , ಅದನ್ನು ವೈಜ್ಞಾನಿಕ ಪರೀಕ್ಷೆಗೆ ಕೊಂಡೊಯ್ದಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com