ನೇತಾಜಿ ಬೇಹು: ಬ್ರಿಟನ್ ತನಿಖಾ ಸಂಸ್ಥೆಗೂ ಮಾಹಿತಿ

ನೇತಾಜಿ ಸುಭಾಶ್ಚಂದ್ರ ಬೋಸ್ ಕುಟುಂಬ ಸದಸ್ಯರು ಮತ್ತು ಬಂಧುಗಳ ಮೇಲೆ ನೆಹರು ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ವಿಚಾರ ಈಗ ಹೊಸ ಮಜಲು ಪ್ರವೇಶಿಸಿದೆ. ಅಂದಿನ ಸರ್ಕಾರ ಬೇಹುಗಾರಿಕೆ ಮೂಲಕ ಪಡಕೊಂಡಿದ್ದ ಮಾಹಿತಿ...
ನೇತಾಜಿ ಬೇಹು: ಬ್ರಿಟನ್ ತನಿಖಾ ಸಂಸ್ಥೆಗೂ ಮಾಹಿತಿ
ನೇತಾಜಿ ಬೇಹು: ಬ್ರಿಟನ್ ತನಿಖಾ ಸಂಸ್ಥೆಗೂ ಮಾಹಿತಿ

ನವದೆಹಲಿ: ನೇತಾಜಿ ಸುಭಾಶ್ಚಂದ್ರ ಬೋಸ್ ಕುಟುಂಬ ಸದಸ್ಯರು ಮತ್ತು ಬಂಧುಗಳ ಮೇಲೆ ನೆಹರು ಸರ್ಕಾರ ಬೇಹುಗಾರಿಕೆ ನಡೆಸಿತ್ತು ಎಂಬ ವಿಚಾರ ಈಗ ಹೊಸ ಮಜಲು ಪ್ರವೇಶಿಸಿದೆ.

ಅಂದಿನ ಸರ್ಕಾರ ಬೇಹುಗಾರಿಕೆ ಮೂಲಕ ಪಡಕೊಂಡಿದ್ದ ಮಾಹಿತಿಯನ್ನು ಯುನೈಟೆಡ್ ಕಿಂಗ್‍ಡಮ್ ನ ತನಿಖಾ ಸಂಸ್ಥೆ ಎಂಐ 5ಗೆ ಹಸ್ತಾಂತರ ಮಾಡಿತ್ತು ಎಂಬ ವಿಚಾರವನ್ನು ಇಂಡಿಯಾ ಟುಡೇ ಮತ್ತು ಮೈಲ್‍ಟುಡೇ ಮಾಡಿದೆ.

ಅದಕ್ಕೆ ಪೂರಕವಾಗಿ 1967ರ ಅ.6ರಂದು ಇಂಟೆಲಿಜೆನ್ಸ್ ಬ್ಯೂರೋದ ಅಂದಿನ ಉಪ ನಿರ್ದೇಶಕ ಎಸ್.ಬಾಲಕೃಷ್ಣ ಶೆಟ್ಟಿ ನೇತಾಜಿ ಯವರ ಆಪ್ತ ಎ.ಸಿ.ಎನ್. ನಂಬಿಯಾರ್ ಬಗ್ಗೆ ಸಂಗ್ರಹಿಸಿದ್ದ ಮಾಹಿತಿಯನ್ನು ಎಂಐ5ಗೆ ರವಾನಿಸುವ ಬಗ್ಗೆ ಪತ್ರ ಬರೆದಿದ್ದರು. ಇದರ ಜತೆಗೆ ಕೋಲ್ಕತಾ (ಹಿಂದಿನ ಕಲ್ಕತ್ತಾ)ದಲ್ಲಿದ್ದ ನೇತಾಜಿ ಬಂಧು ಅಮಿಯನಾಥ್ ಬೋಸ್ ಬಗ್ಗೆ ಸಂಗ್ರಹಿಸಿದ್ದ ವಿವರಣೆಯನ್ನು ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಶೆಟ್ಟಿಯವರು ಯು.ಕೆಯ ತನಿಖಾ ಸಂಸ್ಥೆಯ ಭದ್ರತಾ ವಿಭಾಗದ ಅಧಿಕಾರಿ ಕೆ.ಎಂ.ಬೋರ್ನ್‍ಗೆ ಪತ್ರದಲ್ಲಿ ಅಡಕ ಮಾಡಲಾಗಿರುವ ಮಾಹಿತಿ ಬಗ್ಗೆ ಪ್ರಸ್ತಾಪಿಸಿದ್ದರು.

ಅಂದ ಹಾಗೆ ನೇತಾಜಿಯವರ ಆಪ್ತ ಎ.ಸಿ.ಎನ್. ನಂಬಿಯಾರ್ 1924ರಲ್ಲಿ ಬರ್ಲಿನ್‍ನಲ್ಲಿ ಪತ್ರರ್ತರಾಗಿದ್ದರು. ಅವರು ದಿ.ನೆಹರೂ ಜತೆಗೂ ಕೆಲಸ ಮಾಡಿದ್ದರು. ನಂತರದ ದಿನಗಳಲ್ಲಿ ನಂಬಿಯಾರ್‍ರನ್ನು ಸ್ವಿಜರ್‍ಲೆಂಡ್‍ನಲ್ಲಿ ಭಾರತದ ರಾಯಭಾರಿ ಯನ್ನಾಗಿ ನೇಮಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ನೇತಾಜಿ ಬಂಧುಗಳ ಜತೆ ನಡೆಸುತ್ತಿದ್ದ ಪತ್ರ ವ್ಯವಹಾರವನ್ನು ಕೂಡ ಇಂಟೆಲಿಜೆನ್ಸ್ ಬ್ಯೂರೋ ನಿಕಟವಾಗಿ ಗಮನಿಸುತ್ತಿತ್ತು. ಕುತೂಹಲಕಾರಿ ಅಂಶವೆಂದರೆ ಎಂಐ5 ತನಿಖಾ ಸಂಸ್ಥೆ ನಂಬಿಯಾರ್ ರನ್ನು ಹಿಂದಿನ ಸೋವಿಯತ್ ಒಕ್ಕೂಟದ ಗೂಢಚಾರಿ ಎಂದು ನಂಬಿತ್ತಂತೆ.

ಭಗತ್ ಸಿಂಗ್ ಮೇಲೂ...
ನೇತಾಜಿ ಕುಟುಂಬ ಸದಸ್ಯರ ಮೇಲೆ ಬೇಹುಗಾರಿಕೆ ನಡೆಸಲಾಗಿದೆ ಎಂಬ ವಿವಾದ ಇರುವಂತೆಯೇ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಕುಟುಂಬಸ್ಥರೂ ಈಗ ತಮ್ಮ ಮೇಲೆ ಸರ್ಕಾರ ನಿಗಾ ಇರಿಸಿತ್ತು ಎಂದು ಆರೋಪಿಸಿದ್ದಾರೆ. ಮೊಹಾಲಿಯಲ್ಲಿ ಮಾತನಾಡಿದ ಭಗತ್ ಸಿಂಗ್‍ರ ಸೋದರ ಸಂಬಂಧಿ ಅಭಯ್ ಸಿಂಗ್ ಸಂಧು ಬ್ರಿಟೀಷ್ ಸರ್ಕಾರದ ಅವಧಿಯಲ್ಲೇ ನಿಗಾ ನಡೆಸಲಾಗುತ್ತಿತ್ತು.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಬಹುಕಾಲ ಮುಂದುವರಿದಿತ್ತು ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com