2017ರ ವೇಳೆಗೆ ಭಾರತದ ಜಿಡಿಪಿ ಶೇ.8ಕ್ಕೆ ತಲುಪಲಿದೆ: ವಿಶ್ವಬ್ಯಾಂಕ್

ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿರುವ ಭಾರತ 2017 ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಸರಾಸರಿ ಶೇ 8ರಷ್ಟು ಪ್ರಗತಿ ಸಾಧಿಸುವ....
ವಿಶ್ವಬ್ಯಾಂಕ್
ವಿಶ್ವಬ್ಯಾಂಕ್

ವಾಷಿಂಗ್ಟನ್: ಆರ್ಥಿಕವಾಗಿ ಪ್ರಗತಿ ಸಾಧಿಸುತ್ತಿರುವ ಭಾರತ 2017 ರ ವೇಳೆಗೆ ಒಟ್ಟು ರಾಷ್ಟ್ರೀಯ ಉತ್ಪನ್ನ(ಜಿಡಿಪಿ) ಸರಾಸರಿ ಶೇ 8ರಷ್ಟು ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ವಿಶ್ವ ಸಂಸ್ಥೆ ತನ್ನ ಅರ್ಧ ವಾರ್ಷಿಕ ವರದಿಯಲ್ಲಿ ದಕ್ಷಿಣ ಏಷ್ಯಾದಲ್ಲಿನ ಆರ್ಥಿಕ ಬೆಳವಣಿಗೆ ಮತ್ತು ಭಾರತದಲ್ಲಿ ಅಭಿವೃದ್ಧಿಗೆ ಪೂರಕವಾದ ತೈಲ ಬೆಲೆಯೂ ಸೇರಿದಂತೆ ಭವಿಷ್ಯದಲ್ಲಿ ಭಾರತದ ಜಿಡಿಪಿಯನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದೆ.

ಪ್ರಸ್ತುತ 2015/16ನೇ ಸಾಲಿನಲ್ಲಿ ಭಾರತದ ಜಿಡಿಪಿ ಪ್ರಗತಿಯನ್ನು ಶೇ 7.5ರಷ್ಟು ನಿರೀಕ್ಷಿಸಲಾಗಿದೆ. ಹೂಡಿಕೆ ಮತ್ತು ಬೆಳವಣಿಗೆಯ ಆಧಾರದ ಮೇಲೆ 2017/18ರ ವೇಳೆಗೆ ಭಾರತದ ಜಿಡಿಪಿ ಪ್ರಗತಿಯು ಶೇ.8ಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಬ್ಯಾಂಕ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com