
ನ್ಯೂಯಾರ್ಕ್: ಓದುಗರಿಂದ ಆನ್‌ಲೈನ್ ಚುನಾವಣೆ ಮೂಲಕ ಟೈಮ್ ಮ್ಯಾಗಝಿನ್ ಆಯ್ಕೆ ಮಾಡಿರುವ ವಿಶ್ವದ 100 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸ್ಥಾನ ಪಡೆದಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 'ಟೈಮ್ 100 ರೀಡರ್ಸ್ ಪೋಲ್'ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅಗ್ರ ಸ್ಥಾನಕ್ಕಾಗಿ ಪುಟಿನ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದ ದಕ್ಷಿಣ ಕೋರಿಯಾದ ಬಾಲಕಿಯರ ಸಮೂಹ 2ಎನ್‌ಇ1 ಇದರ ರಾಪರ್ ಸಿಂಗರ್ ಸೆಲ್ ಇವರನ್ನು ಶೇ.6.95 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.
ಇನ್ನು ಪಾಪ್ ಸ್ಟಾರ್ ಲೇಡಿ ಗಾಗಾ (ಶೇ.2.6 ಮತ), ರಿಹಾನಾ (ಶೇ.1.9) ಮತ್ತು ಟಯ್ಲರ್ ಸ್ವಿಫ್ಟ್ (ಶೆ.1.8) ಅಗ್ರ ಐದು ಸ್ಥಾನಗಳನ್ನು ಹಂಚಿಕೊಂಡಿದ್ದಾರೆ.
ಟೈಮ್ ಮ್ಯಾಗಝಿನ್ ಈ ವಾರಾಂತ್ಯಕ್ಕೆ ವಿಶ್ವದ 100 ಅತಿ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಕಳೆದು ಹೋಗಿರುವ ವರ್ಷದಲ್ಲಿ ವಿಶ್ವವನ್ನು ಉನ್ನತಿಗೆ ಅಥವಾ ಅವನತಿಗೆ ಒಯ್ಯುವಲ್ಲಿ ಪಾತ್ರವಹಿಸಿರುವ ರಾಜಕೀಯ, ಮನೋರಂಜನೆ, ಉದ್ಯಮ, ತಂತ್ರಜ್ಞಾನ, ವಿಜ್ಞಾನ, ಧರ್ಮ ಮತ್ತು ಇತರ ಯಾವುದೇ ಪ್ರಮುಖ ರಂಗದ ವ್ಯಕ್ತಿಗಳಿಗೆ ಆನ್‌ಲೈನ್‌ನಲ್ಲಿ ಮತ ಹಾಕುವಂತೆ ಟೈಮ್ಸ್ ಸಂಪಾದಕರು ಓದುಗರನ್ನು ಕೇಳಿಕೊಂಡಿದ್ದರು.
Advertisement