
ಲಾಹೋರ್: ಪಾಕಿಸ್ತಾನದಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬರು ಆಟೋ ಚಾಲನೆಗೆ ಮುಂದಾಗಿದ್ದಾರೆ.
ಆಟೋ ಚಾಲನೆ ಮಾಡುವುದರ ಮೂಲಕ ಪಾಕ್ ನ ಪ್ರಥಮ ಆಟೋ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದು ಝರಾ ಅಸ್ಲಮ್. ಈಕೆ ತಮ್ಮ ಆಟೋವನ್ನು ಲಾಹೋರಿನ ರಸ್ತೆಗಿಳಿಸಿದ್ದಾರೆ. ಪಿಂಕ್ ಮತ್ತು ಬಿಳಿ ಬಣ್ಣದಿಂದಿರುವ ಈ ಆಟೋ ಈಗ ಎಲ್ಲರ ಗಮನ ಸೆಳೆಯುತ್ತಿದೆ.ಇವರ ಆಟೋಗೆ ಫ್ಯಾನ್ ಹಾಗೂ ಬಾಗಿಲುಗಳನ್ನೂ ಅಳವಡಿಸಲಾಗಿದೆ.
ಮಹಿಳೆ ಯಾರ ಮೇಲೆ ಅವಲಂಭಿತವಾಗದೆ, ಸ್ವಾವಲಂಬಿಯಾಗಬೇಕು ಎಂದು ಹೇಳುವ ಆಟೋ ಚಾಲಕಿ ಝರಾ, ಮುಂಬರುವ ದಿನಗಳಲ್ಲಿ 25 ಆಟೋಗಳನ್ನು ಲಾಹೋರಿನ ರಸ್ತೆಗಿಳಿಸಬೇಕೆಂಬ ಹಂಬಲ ಹೊಂದಿದ್ದು, ತಯಾರಿ ನಡೆಸಿದ್ದಾರೆ. ಅಲ್ಲದೇ ಇತರ ಮಹಿಳೆಯರಿಗೂ ಆಟೋ ಚಾಲನೆ ತರಬೇತಿ ನೀಡಿ ಸ್ವಉದ್ಯೋಗಿಗಳಾಗಲು ಪ್ರೋತ್ಸಾಹಿಸಲು ಮುಂದಾಗಿದ್ದಾರೆ.
ಝರಾ ಅಸ್ಲಮ್ ಅವರು ವಿದ್ಯಾರ್ಥಿನಿಯಾಗಿದ್ದಾಗ ಆಟೋ ರಿಕ್ಷಾ ಚಾಲಕನೊಬ್ಬನಿಂದ ಅಪಹರಣಕ್ಕೊಳಗಾಗುವ ಆಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದರು, ಈ ಹಿನ್ನೆಲೆಯಲ್ಲಿ ತನ್ನಂತೆ ಯಾವ ಮಹಿಳೆಯರು ತೊಂದರೆ ಅನುಭವಿಸಬಾರದೆಂಬ ಕಾರಣಕ್ಕೆ ಆಟೋರಿಕ್ಷಾ ಚಾಲನೆ ಕಲಿತು ತಾವೇ ಚಾಲಕರಾಗಿದ್ದಾರೆ.
Advertisement