ಉಗ್ರ ಲಖ್ವಿ ಬಿಡುಗಡೆ ವಿರುದ್ಧ ಪಾಕ್ ಸುಪ್ರೀಂ ಮೆಟ್ಟಿಲೇರಿದ ಪಂಜಾಬ್ ಸರ್ಕಾರ

ಝಕಿ ಉರ್ ರೆಹಮಾನ್ ಲಖ್ವಿ
ಝಕಿ ಉರ್ ರೆಹಮಾನ್ ಲಖ್ವಿ

ಲಾಹೋರ್: ಮುಂಬೈ ದಾಳಿಯ ಮಾಸ್ಟರ್‌ಮೈಂಡ್ ಹಾಗೂ ಲಷ್ಕರ್-ಇ-ತೊಯಿಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿಯ ಬಿಡುಗಡೆ ವಿರುದ್ಧ ಪಾಕಿಸ್ತಾನದ ಪಂಜಾಬ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಲಾಹೋರ್ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂದು ಮೇಲ್ಮನವಿ ಅರ್ಜಿ ಸಲ್ಲಿಸಿರುವ ಪಂಜಾಬ್ ಸರ್ಕಾರ, ಉಗ್ರ ಲಖ್ವಿ ಬಿಡುಗಡೆ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿದೆ.

55 ವರ್ಷದ ಉಗ್ರ ಲಖ್ವಿಯ ಬಿಡುಗಡೆಯಿಂದಾಗಿ ಸರ್ಕಾರಕ್ಕೆ ಸಮಸ್ಯೆಯಾಗಿದೆ ಮತ್ತು ಇದರಿಂದ ಮುಂಬೈ ದಾಳಿ ಪ್ರಕರಣದ ತನಿಖೆಗೂ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಎಂದು ಪಂಜಾಬ್ ಸರ್ಕಾರ ತನ್ನ ಅರ್ಜಿಯಲ್ಲಿ ಹೇಳಿಕೊಂಡಿದೆ.

ಪಾಕಿಸ್ತಾನ ಸರ್ಕಾರ ಲಖ್ವಿಯ ರಹಸ್ಯ ದಾಖಲೆ ಪತ್ರಗಳು ಮತ್ತು ಆತನ ಚಟುವಟಿಕೆಯ ವಿವರ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಲಾಹೋರ್ ಕೋರ್ಟ್, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಯಿದೆಯಡಿ ಲಖ್ವಿ ಬಂಧನವನ್ನು ರದ್ದುಗೊಳಿಸಿ, ಬಿಡುಗಡೆಗೆ ಆದೇಶಿಸಿ
ತ್ತು. ಕೋರ್ಟ್ ಆದೇಶದಂತೆ ಏಪ್ರಿಲ್ 10ರಂದು
ಉಗ್ರ ಲಖ್ವಿಯನ್ನು ರಾವಲ್ಪಿಂಡಿ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com